ಹಳಿಯಾಳ: ಪೊಲೀಸ್ ಇಲಾಖೆಯಿಂದ ಗುರುತು ಚೀಟಿ ವಿತರಣೆ, ಜಾತ್ರೆಯ ಸಮಯದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶೌರ್ಯ ಸ್ವಯಂಸೇವಕರ ಸಹಕಾರ.

ಹಳಿಯಾಳ ತಾಲೂಕಿನ ತೆರೆಗಾವ್ ವಲಯ ಸಾತನಳ್ಳಿ ಕಾರ್ಯಕ್ಷೇತ್ರದ ಶೌರ್ಯ ವಿಪತ್ತು ನಿರ್ವಹಣಾ  ಘಟಕ ಸಾತನಳ್ಳಿ ಮತ್ತು ಹುನುಸವಾಡ ಘಟಕ 13 ಜನ  ಸ್ವಯಂಸೇವಕರು ಮತ್ತು ಅಳ್ನಾವರ ವಲಯದ ಹುಲಿಕೇರಿ ಘಟಕ 6 ಜನ  ಸ್ವಯಂಸೇವಕರು ಅಳ್ಳಾವರ ಪೊಲೀಸ್ ಠಾಣೆ ಠಾಣಾಧಿಕಾರಿಯವರ ಮಾರ್ಗದರ್ಶನದಲ್ಲಿ ಜಾತ್ರೆ ಸಮಯದಲ್ಲಿ ಟ್ರಾಫಿಕ್ ನಿಯಂತ್ರಣ ಕೆಲಸ ನಿರ್ವಹಿಸಿದರು.

ಮೂರು ದಿನಗಳ ಕಾಲ ಜಾತ್ರೆಗೆ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಬರುವುದರಿಂದ ಪೊಲೀಸ್ ಇಲಾಖೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯ ಶೌರ್ಯ ತಂಡವನ್ನು ಕಳುಹಿಸುವಂತೆ ತಾಲ್ಲೂಕು ಯೋಜನಾಧಿಕಾರಿ ಯವರಿಗೆ ಮನವಿ ಮಾಡಿಕೊಂಡಿತ್ತು.
ಈ ಪ್ರಕಾರ ಮೂರು ದಿನ ಸ್ವಯಂಸೇವಕರು ಸೇವೆ ಸಲ್ಲಿಸಿದರು. ಸ್ವಯಂಸೇವಕರ ಸೇವೆಗೆ
ಠಾಣಾಧಿಕಾರಿ ಪ್ರವೀಣ್ ಕುಮಾರ್ ರವರು ಮೆಚ್ಚುಗೆ ವ್ಯಕ್ತಪಡಿಸಿದರು.

ಯೋಜನೆಯ ಅಳ್ಳಾವರ ವಲಯದ ಮೇಲ್ವಿಚಾರಕರಾದ ಸೋಮನಿಂಗ್ ಸ್ವಯಂಸೇವಕರಿಗೆ ಪ್ರೇರಣೆ ನೀಡಿದರು.
ಬೆಳಿಗ್ಗೆ 9:30 ರಿಂದ  6:00 ವರೆಗೆ ಪೊಲೀಸ್ ಠಾಣೆ ಆವರಣದಲ್ಲಿ ಮತ್ತು 6 ಗಂಟೆಯಿಂದ ರಾತ್ರಿ 10:00 ವರೆಗೆ ವರೆಗೆ ಪಾರ್ಕಿಂಗ್ ಗಳಲ್ಲಿ ಮತ್ತು ಮುಖ್ಯ ರಸ್ತೆಯಲ್ಲಿ  ಶೌರ್ಯ ತಂಡ ಸೇವೆ ಸೇವೆ ಸಲ್ಲಿಸಿದರು. ಸೇವೆ ಸಲ್ಲಿಸಿದ ಸ್ವಯಂಸೇವಕರಿಗೆ ಪೊಲೀಸ್ ಇಲಾಖೆ ಗುರುತು ಚೀಟಿ ನೀಡಿತ್ತು.

Comments