ಕೋಲಾರ: ಸಂತ್ರಸ್ತ ಕುಟುಂಬಗಳಿಗೆ ಹಾಲು ವಿತರಣೆ
ಕೋಲಾರ: ತಾಲೂಕಿನ ಕಟಾರಿಪಾಳ್ಯದಲ್ಲಿ ನೆಲೆನಿಂತಿದ್ದ ಸಂತ್ರಸ್ತ ಕುಟುಂಬಗಳಿಗೆ ಹಾಲು ವಿತರಿಸಲಾಯಿತು. ರಸ್ತೆ ರಿಪೇರಿ ಕೆಲಸಕ್ಕೆಂದು ಉತ್ತರ ಕರ್ನಾಟಕ ಭಾಗದಿಂದ ಆಗಮಿಸಿದ್ದ ಕಾರ್ಮಿಕರು ತಾತ್ಕಾಲಿಕ ಶೆಡ್ಗಳಲ್ಲಿ ಕಳೆದ ಆರು ತಿಂಗಳಿನಿAದ ವಾಸವಾಗಿದ್ದರು. ಲಾಕ್ಡೌನ್ ಸಮಸ್ಯೆಯಿಂದ ಸಂಚಾರ ನಿರ್ಬಂಧÀ ಇರುವ ಹಿನ್ನೆಲೆಯಲ್ಲಿ ತಮ್ಮ ಊರಿಗೆ ಮರಳಲು ಸಾಧ್ಯವಾಗದೇ ಇಪ್ಪತ್ತೊಂದು ಕುಟುಂಬಗಳು ತಾತ್ಕಾಲಿಕ ಶೆಡ್ಗಳಲ್ಲಿ ಆಶ್ರಯ ಪಡೆದಿದ್ದರು. ಅವರ ಅವಶ್ಯಕತೆಗಳನ್ನು, ಅವರಿಂದಲೇ ತಿಳಿದುಕೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಗತ್ಯವಿರುವ ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸಿತ್ತು. ಅಲ್ಲದೇ ಹಾಲು ಒದಗಿಸಿಕೊಡುವಂತೆ ಸಂತ್ರಸ್ತರು ವಿನಂತಿಸಿಕೊAಡಾಗ ಪ್ರತಿ ಸಂತ್ರಸ್ಥರ ಮನೆಗೆ ತೆರಳಿದ ಯೋಜನೆಯ ಕಾರ್ಯಕರ್ತರು ಹಾಲು ವಿತರಿಸಿ ಅನುಕೂಲ ಮಾಡಿಕೊಟ್ಟಿರುತ್ತಾರೆ. ಯೋಜನೆಯ ಕಾರ್ಯಕರ್ತರ ಈ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.
Comments
Post a Comment