ಯಾದಗಿರಿ: ಪೌಷ್ಟಿಕ ಆಹಾರ ವಿತರಣೆ


    ಯಾದಗಿರಿ ತಾಲ್ಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು. ತಾಲೂಕಿನ ಮಾತಾ ಮಾಣಿಕ್ಯೇಶ್ವರಿ ನಗರದಲ್ಲಿ ಸ್ಥಳೀಯ ಮುಖಂಡರಾದ ಶ್ರೀ ಬಸವಂತರೆಡ್ಡಿ ಹಾಗೂ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸುಮಾ ಅವರು ಕಿಟ್ ವಿತರಣೆ ಮಾಡಿದರು. ಲಾಕ್‌ಡೌನ್ ಸೃಷ್ಟಿಸಿದ ಬಿಕ್ಕಟ್ಟಿನಿಂದ ಕೆಲಸವಿಲ್ಲದೆ ಒಪ್ಪೊತ್ತಿನ ಊಟಕ್ಕೂ ತೊಂದರೆ ಪಡುವ ಪರಿಸ್ಥಿತಿ ಹಲವÀರಿಗೆ ಎದುರಾಗಿದೆ. ಗರ್ಭಿಣಿಯರು ಹಾಗೂ ಬಾಣಂತಿಯರು ಪೌಷ್ಟಿಕ ಆಹಾರದಿಂದ ವಿಮುಖರಾಗಬಾರದು ಎಂದು ಮನಗಂಡು ಅಂತಹ ಕುಟುಂಬಗಳನ್ನು ಗುರುತಿಸಿ ಕಿಟ್‌ಗಳನ್ನು ವಿತರಿಸಲಾಯಿತು.
  ತಾಯಿ ಮಕ್ಕಳ ಸದೃಢ ಆರೋಗ್ಯಕ್ಕಾಗಿ ೦-೬ ವರ್ಷದ ಮಕ್ಕಳು ಹಾಗೂ ತಾಯಂದಿರ ಆರೋಗ್ಯ, ಪೌಷ್ಟಿಕ ಮಟ್ಟವನ್ನು ವೃದ್ಧಿಸುವುದು, ಮಗುವಿನ ದೈಹಿಕ ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು, ಮಕ್ಕಳಲ್ಲಿ ಸಾವು, ಅನಾರೋಗ್ಯ, ಅಪೌಷ್ಟಿಕತೆ ತಡೆಯುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳಡಿ ಪೌಷ್ಟಿಕ ಆಹಾರವನ್ನು ವಿತರಿಸುತ್ತಿದೆ. ಅಪೌಷ್ಟಿಕತೆಯನ್ನು ತಡೆಯುವುದು ಸರ್ಕಾರದ ಉದ್ದೇಶ. ಇದಕ್ಕಾಗಿ ಮುಖ್ಯಮಂತ್ರಿ ಮಾತೃಪೂರ್ಣ ಯೋಜನೆ, ಮಾತೃಶ್ರೀ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಆದರೆ ರೊರೋನಾ ಸಮಸ್ಯೆಯಿಂದ ಸಂಚಾರ ನಿರ್ಬಂಧ ಇರುವುದರಿಂದ, ಅಲ್ಲದೇ ಸೋಂಕು ತಗಲುವ ಭೀತಿ ಇರುವುದರಿಂದ ಕಳೆದ ಎರಡು ತಿಂಗಳಿAದ ಅಂಗನವಾಡಿ ಕೇಂದ್ರಗಳಿಗೆ ತೆರಳಲಾರದೆ ಗರ್ಭಿಣಿಯರು ತೊಂದರೆಗೆ ಒಳಗಾಗಿದ್ದಾರೆ. ಅವರುಗಳು ಪೌಷ್ಟಿಕ ಆಹಾರದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಅಂತಹ ಕುಟುಂಬಗಳನ್ನು ಗುರುತಿಸಿ ಕಿಟ್ ದೊರೆಯುವಂತೆ ಮಾಡಿದ್ದಾರೆ. ದವಸ ಧಾನ್ಯಗಳು ಹಾಗೂ ಪೌಷ್ಟಿಕ ಆಹಾರಗಳನ್ನೊಗೊಂಡ ಕಿಟ್‌ಗಳನ್ನು ವಿತರಿಸುವುದರ ಜೊತೆಗೆ ಅಂಗನವಾಡಿ ಕೇಂದ್ರಗಳನ್ನು ಭೇಟಿ ಮಾಡಿ ಸರ್ಕಾರ ಒದಗಿಸುವ ಪೌಷ್ಟಿಕ ಆಹಾರವನ್ನು ತಪ್ಪದೇ ಪಡೆದುಕೊಳ್ಳುವಂತೆ ಮಾಹಿತಿ ನೀಡಲಾಯಿತು. 
        ಸ್ಥಳೀಯ ಮುಖಂಡರಾದ ಶ್ರೀ ಬಸವಂತರೆಡ್ಡಿ, ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಕು. ಸುಮಾ, ಜಿಲ್ಲಾ ನಿರ್ದೇಶಕರಾದ  ಶ್ರೀ ದಿನೇಶ್, ರಾಜ್ಯ ಕಲಾವಿದರ ಸಂಘದ ಉಪಾಧ್ಯಕ್ಷರಾದ ಶ್ರೀ ಶರಣಪ್ಪ, ಬುಡಕಟ್ಟು ಹಾಗೂ ಅಲೆಮಾರಿ ಜನಾಂಗದ ಮುಖಂಡರಾದ ಶಂಕರ ಶಾಸ್ತಿ, ಆತ್ಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ  ಶ್ರೀ ಮಂಜುನಾಥ, ಯೋಜನಾಧಿಕಾರಿಗಳಾದ  ಶ್ರೀ ರಾಘವೇಂದ್ರ ಪಟಗಾರ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಶಿವಲೀಲಾ ಉಪಸ್ಥಿತರಿದ್ದರು.

Comments