ಕೋಲಾರ: ಆಟಿಕೆ ವಸ್ತುಗಳ ವ್ಯಾಪಾರಿ ಕುಟುಂಬಗಳಿಗೆ ನೆರವು


ಕೋಲಾರ ತಾಲೂಕಿನ ವಾನರಾಶಿ ಗ್ರಾಮದಲ್ಲಿ ಕೊಲ್ಲಾಪುರದಿಂದ ಆಗಮಿಸಿದ್ದ ವ್ಯಾಪಾರಿ ಕುಟುಂಬಗಳು ಲಾಕ್ ಆಗಿದ್ದವು. ಪ್ರತಿ ವರ್ಷ ರಾಮನವಮಿ ದಿನದಂದು ಇಲ್ಲಿ ಜಾತ್ರೆ ನಡೆಯುತ್ತದೆ. ಸಾವಿರಾರು ಜನ ಸೇರುವುದರಿಂದ ವ್ಯಾಪಾರವೂ ಚೆನ್ನಾಗಿಯೇ ಆಗುತ್ತದೆ. ಹೀಗೆಂದು ಭಾವಿಸಿ ಪ್ರತಿ ವರ್ಷದಂತೆ ಈ ವರ್ಷವೂ ದೂರದ ಕೊಲ್ಲಾಪುರದಿಂದ ಬಂದ ಆಟಿಕೆ ಸಾಮಾನುಗಳನ್ನು ಮಾರುವ ನಾಲ್ಕು ಕುಟುಂಬಗಳು ಸರ್ಕಾರ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವು.  ಜಾತ್ರೆಯೂ ರದ್ದಾಗಿದ್ದರಿಂದ ವ್ಯಾಪಾರ ನಡೆಸಲು ಆಗಿರಲಿಲ್ಲ. ಕೆಲಸವಿಲ್ಲದೇ, ಆದಾಯವಿಲ್ಲದೇ ಅವರ ಬದುಕು ಅತಂತ್ರವಾಗಿತ್ತು. ದುಡಿಮೆ ಇಲ್ಲದ ಕಾರಣ ಕೈಯಲ್ಲಿದ್ದ ಹಣವೂ ಖಾಲಿಯಾಗಿತ್ತು. ಬಯಲು ಸ್ಥಳದಲ್ಲಿ ಹಳೆಯ ಬಟ್ಟೆಗಳಿಂದ ತಾತ್ಕಾಲಿಕ ಟೆಂಟ್ ಕಟ್ಟಿಕೊಂಡು ವಾಸವಾಗಿದ್ದ ಅವರ ಸ್ಥಿತಿ ಬಲು ನೋವಿನದಾಗಿತ್ತು. ಇದನ್ನು ಗುರುತಿಸಿದ ಸ್ಥಳಿಯರು ನೆರವು ನೀಡುವಂತೆ ಗ್ರಾಮಾಭಿವೃದ್ಧಿ ಯೋಜನೆಗೆ ಮನವಿ ಮಾಡಿಕೊಂಡಿದ್ದರು. ಕೂಡಲೇ ಸ್ಪಂದಿಸಿದ ಯೋಜನೆ ಆಹಾರ ಧಾನ್ಯಗಳ ಕಿಟ್ ಒದಗಿಸಿ ಆಸರೆ ನೀಡಿದೆ.  ಬ 
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ರವೀಂದ್ರ, ಗ್ರಾಮದ ಮುಖಂಡರಾದ ಶ್ರೀ ಅಶೋಕ, ಮಂಜುನಾಥ, ಮುನಿಶಾಮಿಗೌಡ, ಸೂರ್ಯನಾರಾಯಣ ಗೌಡ,  ಒಕ್ಕೂಟದ ಕಾರ್ಯದರ್ಶಿ ಶಿಲ್ಪಾ, ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ನಂಜುಡಪ್ಪ ಶೆಟ್ಟಿ ಅವರು ನೆರವೇರಿಸಿದರು. ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಮಂಜುನಾಥ ನಾಗರಾಳ, ಶ್ರೀಮತಿ ಅರುಣಮ್ಮ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಮಂಜುಳಾ, ಸೇವಾಪ್ರತಿನಿಧಿ ಅನಿಲ್ ಕುಮಾರಿ ಉಪಸ್ಥಿತರಿದ್ದರು.

Comments