ಕೋಲಾರ: ಆಹಾರ ಧಾನ್ಯಗಳ ಕಿಟ್ ವಿತರಣೆ
ಕೋಲಾರ ತಾಲೂಕಿನ ತಲಗುಂದ ಗ್ರಾಮದಲ್ಲಿ ನೆಲೆನಿಂತಿದ್ದ ಸಂತ್ರಸ್ತ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು. ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀ ಬಿ.ಸಿ ಒಡೆಯರ್ ಕಿಟ್‌ಗಳನ್ನು ವಿತರಿಸಿದರು. ತಲಗುಂದ ಕೆರೆಯಂಗಳದಲ್ಲಿ ಈ ಕುಟುಂಬಗಳು ವಾಸವಾಗಿದ್ದವು. ಹಳೆಯ ಸೀರೆ, ತಾಡಪಾಲ್‌ಗಳನ್ನು ಬಳಸಿಕೊಂಡು ತಾತ್ಕಾಲಿಕ ಗುಡಿಸಲು ಕಟ್ಟಿಕೊಂಡು ನೆಲೆ ನಿಂತಿದ್ದ ಹಲವು ಅಲೆಮಾರಿ ಕುಟುಂಬಗಳು ಸಮಸ್ಯೆಗೆ ಸಿಲುಕಿದ್ದವು. ಯಾದಗಿರಿ, ವಿಜಯಪುರ, ಗದಗ ಭಾಗಗಳಿಂದ ಕೂಲಿಗೆಂದು ಬಂದ ಕುಟುಂಬಗಳು ಅಲ್ಲಿದ್ದವು. ಊರೂರು ತಿರುಗಿ ಹಳೆಯ ಬಟ್ಟೆಗಳನ್ನು ವಿಕೃಯಿಸುವುದು, ಕೂದಲು ಸಂಗ್ರಹಿಸಿ ಮಾರಾಟ ಮಾಡಿ ಗಳಿಕೆ ಕಂಡುಕೊಳ್ಳುವುದು, ಕಲ್ಲು ಬಂಡೆಗಳನ್ನು ಒಡೆದು ಅದರಿಂದ ಬಂದ ಕೂಲಿ ಮೊತ್ತದಿಂದ ದಿನದ ಊಟ ಪೂರೈಸಿಕೊಳ್ಳುವುದು ಆ ಕುಟುಂಬಗಳ ದಿನಚರಿ.
ಕೊರೋನಾ ವಿಪತ್ತಿನ ಕಾರಣದಿಂದಾಗಿ ಈ ಎಲ್ಲಾ ಕುಟುಂಬಗಳು ಕೆಲಸವಿಲ್ಲದೇ ಹಸಿವು ಕಟ್ಟಿಕೊಂಡು ದಿನ ದೂಡುವ ಸ್ಥಿತಿ ಉದ್ಭವವಾಗಿತ್ತು. ಸಂಚಾರ ನಿರ್ಭಂದ ಇರುವುದರಿಂದ ಕೆಲಸಕ್ಕೆ ತೆರಳಲು ಸಾಧ್ಯವಾಗದೇ ಅವರು ಅನುಭವಿಸುತ್ತಿದ್ದ ಪರಿಪಾಟಲು ತೀರಾ ನೋವಿನದಾಗಿತ್ತು. ಲಾಕ್‌ಡೌನ್ ಆದೇಶವಾದಾಗ ಸ್ಥಳೀಯ ಆಡಳಿತ ಊಟದ ವ್ಯವಸ್ಥೆ ಮಾಡಿತ್ತು. ಆದಾಗ್ಯೂ ಲಾಕ್‌ಡೌನ್ ವಿಸ್ತರಣೆಯಾದ ಬಳಿಕ ಆ ಕುಟುಂಬಗಳಿಗೆ ಆಹಾರ ತಲುಪಿಸುವವರ ಅಗತ್ಯತೆ ಎದುರಾಗಿತ್ತು. ಹಲವು ಸಹೃದಯರು ಆಗಾಗ ಆಹಾರ ಪೂರೈಕೆ ಮಾಡುತ್ತಿದ್ದರೂ ಅವರಿಂದ ನಿತ್ಯವೂ ಸಿಗುತ್ತದೆ ಎನ್ನುವ ಭರವಸೆ ಆ ಕುಟುಂಬಗಳಿಗಿರಲಿಲ.್ಲ ಆಹಾರ ತಂದುಕೊಡುವವರು ಬರದಿದ್ದರೆ ಆ ದಿನ ಉಪವಾಸ ಇರಬೇಕಾದ ಪರಿಸ್ಥಿತಿ ಅವರದಾಗಿತ್ತು. ಊರಿಗೆ ಮರಳಲು ಸಂಚಾರ ನಿರ್ಬಂಧÀದ ತೊಡಕು. ಸುಲಭವಾಗಿ ಹೊರಡುವಂತಿರಲಿಲ್ಲ.
ಹೀಗೆ ಸಮಸ್ಯೆಗೆ ಸಿಲುಕಿದ ಕುಟುಂಬಗಳ ಪರಿಸ್ಥಿತಿಯನ್ನು ಅರಿತ ಸ್ಥಳೀಯ ಸಾರ್ವಜನಿಕರು ವಿಷಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ತಿಳಿಸಿದ್ದರು. ಸ್ಥಳಕ್ಕೆ ಧಾವಿಸಿದ ಯೋಜನೆಯ ಕಾರ್ಯಕರ್ತರು ಪರಿಸ್ಥಿತಿಯನ್ನು ಅವಲೋಕಿಸಿ ಸಮಸ್ಯೆಯಲ್ಲಿರುವವರ ಯಾದಿ ತಯಾರಿಸಿ ಕೇಂದ್ರ ಕಚೇರಿಗೆ ತಲುಪಿಸಿದ್ದÀರು. ಬೇಡಿಕೆ ತಕ್ಷಣ ಮಂಜೂರಾತಿಯಾಗಿದ್ದರಿAದ ಅಲ್ಲಿನ ಕುಟುಂಬಗಳ ಹಸಿವು ನೀಗಿದಂತಾಗಿತ್ತು. ಹದಿನೈದು ದಿನಗಳಿಗೆ ಸಾಲುವಷ್ಟು ಧಾನ್ಯಗಳ ಕಿಟ್ ಆ ಪ್ರದೇಶದಲ್ಲಿನ ಕುಟುಂಬಗಳಿಗೆ ವಿತರಿಸಲಾಗಿದೆ. ಕಿಟ್ ಪಡೆದ ಕುಟುಂಗಳು ದಾನಿಗಳು ಆಹಾರ ತಂದುಕೊಡದೇ ಇರುವ ದಿನಗಳಲ್ಲಿ ಬಳಸಿಕೊಳ್ಳುತ್ತಿದ್ದು, ಸಕಾಲದಲ್ಲಿ ದೊರೆತ ನೆರವಿನಿಂದ ಬಹಳ ಅನುಕೂಲವಾಯಿತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಿಟ್ ವಿತರಣೆಯ ಸಂದರ್ಭ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಶಶಿಕುಮಾರ್ ಮತ್ತು ಅರುಣಮ್ಮ, ಪಂಚಾಯತ್ ಸದಸ್ಯರಾದ ಶ್ರೀ ಕೆ.ವಿ ಶ್ರೀನಿವಾಸ್, ತಬರೇಶ್ ಪಾಷಾ, ಜಲಗಾರರಾದ ಶ್ರೀ ವೆಂಕಟರಾಮ ಶೆಟ್ಟಿ, ಒಕ್ಕೂಟದ ಅಧ್ಯಕ್ಷರಾದ ಶ್ರೀ ಮುನಿರಾಜು, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಹಂಸಾ ಮತ್ತು ಶ್ರೀಮತಿ ರೇಖಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಂಜುಳಾ, ಸೇವಾಪ್ರತಿನಿಧಿ ಶ್ರೀಮತಿ ಕಾಂತಮ್ಮ ಉಪಸ್ಥಿತರಿದ್ದರು.
Comments
Post a Comment