ನಡ ಗ್ರಾಮದಲ್ಲಿ ನಡೆದ ಸಭೆ : 13 ಸ್ವಯಂ ಸೇವಕರ ಆಯ್ಕೆ..
ಮಂಜೋಟಿ, ಕನ್ಯಾಡಿ, ನಡ ಗ್ರಾಮದ ಒಟ್ಟು 13 ಮಂದಿ ಆಸಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ 'ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಸಿದ್ಧ' ಎಂದು ಹೇಳಿರುವ ಹಿನ್ನೆಲೆಯಲ್ಲಿ 13 ಸದಸ್ಯರ ನೋಂದಣಿ ಮಾಡಿಕೊಳ್ಳಲಾಯಿತು.
1 ಉರಗ ತಜ್ಞರು, 3 ಇಲೆಕ್ಟ್ರಿಶಿಯನ್ ಗಳು, 2 ಗಾರೆ ಕೆಲಸದ ಮೇಸ್ತ್ರಿ ಗಳು, 2 ಆಟೋ ಚಾಲಕರು, 1 ಟೈಲರ್, 1 ವಾಹನ ಚಾಲಕರು, 3 ಕೃಷಿಕರು ತಂಡದಲ್ಲಿ ಸದಸ್ಯತ್ವ ಪಡೆದಿರುತ್ತಾರೆ.
ಸಭೆಯಲ್ಲಿ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ, ನಡ ಒಕ್ಕೂಟದ ಅಧ್ಯಕ್ಷರಾದ ಶ್ರೀ ಬಿ.ಏ. ರಜಾಕ್, ಮಾಜಿ ಅಧ್ಯಕ್ಷ ರಾದ ಶ್ರೀ ಉಮೇಶ್, ಸೇವಾಪ್ರತಿನಿಧಿಗಳಾದ ಶ್ರೀಮತಿ ಕುಂತಲಾ ಮತ್ತು ಶ್ರೀಮತಿ ಪುಷ್ಪಾ, ವಿಪತ್ತು ನಿರ್ವಹಣೆ ಸಂಯೋಜಕಿಯಾದ ಶ್ರೀಮತಿ ವಸಂತಿ ಅಣ್ಣಿ ಆಚಾರ್ಯ ಉಪಸ್ಥಿತರಿದ್ದರು.
ದಿನಾಂಕ: 09.06.2020
Comments
Post a Comment