ಕಲ್ಲೇರಿಯಲ್ಲಿ ಸ್ವಯಂಸೇವಕರಿಗೆ ಮಾಹಿತಿ ಸಭೆ..
ಗುರುವಾಯನಕೆರೆ: ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಸ್ವಯಂಸೇವಕರ ಆಯ್ಕೆ ಕುರಿತು ಎರಡು ಪ್ರತ್ಯೇಕ ಸಭೆಯನ್ನು ಗುರುವಾಯನಕೆರೆ ಯೋಜನಾ ವ್ಯಾಪ್ತಿಯಲ್ಲಿ ನಡೆಸಲಾಯಿತು.
ಕಲ್ಲೇರಿ, ಕಣಿಯೂರು, ತಣ್ಣೀರಪಂಥ ಹಾಗೂ ಗುರುವಾಯನಕೆರೆಯ ಸುತ್ತಮುತ್ತಲಿನ 28 ಮಂದಿ ಆಸಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈಜು ತಜ್ಞರು- 14
ಉರಗ ತಜ್ಞರು- 01
ಮರ ಏರುವ ತಜ್ಞರು- 03
ಇಲೆಕ್ಟ್ರಿಶಿಯನ್ ಗಳು-02
ಗಾರೆ ಕೆಲಸದ ಮೇಸ್ತ್ರಿ ಗಳು-01
ವಾಹನ ಚಾಲಕರು- 4
ಕೃಷಿಕರು- 3 ಮಂದಿ
ತಂಡದಲ್ಲಿ ಸದಸ್ಯತ್ವ ಪಡೆದಿರುತ್ತಾರೆ.
ವಿಪತ್ತು ನಿರ್ವಹಣೆ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕು.ಹರಿಣಿ, ಮೇಲ್ವಿಚಾರಕರಾದ ಶ್ರೀ ಮಾಧವ್, ಶ್ರೀ ದಿನೇಶ್, ವಿಪತ್ತು ನಿರ್ವಹಣೆ ಸಂಯೋಜಕರಾದ ಶ್ರೀ ಸುರೇಶ್ ಹಾಗೂ ಚಂದ್ರಕಲಾ ಮತ್ತು ಸ್ಥಳೀಯ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ದಿನಾಂಕ: 12.06.2020
Comments
Post a Comment