ಎನ್. ಡಿ. ಆರ್.ಎಫ್ ಸಿಬ್ಬಂದಿಗಳ ಭೇಟಿ: ತರಬೇತಿ ಪೂರ್ವ ತಯಾರಿ ಕುರಿತು ಚರ್ಚೆ.

ಮಂಗಳೂರು: ಗೌರವಾನ್ವಿತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರ ಮಾರ್ಗದರ್ಶನದಂತೆ ವಿಪತ್ತು ನಿರ್ವಹಣೆ ಸ್ವಯಂಸೇವಕರ ತರಬೇತಿ ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಾದ ಸಿಂಧು ಬಿ. ರೂಪೇಶ್ ಅವರನ್ನು ಭೇಟಿ ಮಾಡಲಾಯಿತು. 

ದಿನಾಂಕ:22.06.2020 ರಿಂದ 25.06.2020 ವರೆಗೆ ಬೆಳ್ತಂಗಡಿ ಹಾಗೂ ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ವಿಪತ್ತು ನಿರ್ವಹಣೆ ಸ್ವಯಂಸೇವಕರಿಗೆ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಕೇಂದ್ರ ಸರ್ಕಾರದ  NDRF ತಂಡದ ಮೂಲಕ ತರಬೇತಿ ಕಾರ್ಯಾಗಾರ ನಡೆಯಲಿದೆ.

ಜಿಲ್ಲಾಧಿಕಾರಿಯವರ  ಭೇಟಿಯ ನಂತರ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ ( NDRF ) ಸಿಬ್ಬಂದಿಗಳನ್ನು ಭೇಟಿ ಮಾಡಿ ತರಬೇತಿಯ ಸಿದ್ಧತೆಯ ಬಗ್ಗೆ ಪೂರ್ವಾಲೋಚನೆ ಮಾಡಲಾಯಿತು. ಪ್ರಾಯೋಗಿಕ ತರಬೇತಿಗೆ ಸ್ಥಳದ ಆಯ್ಕೆ, ಅಗತ್ಯ ಉಪಕರಣಗಳು, ತರಬೇತಿಯ ವಿಷಯಗಳ ಕುರಿತು ಚರ್ಚಿಸಲಾಯಿತು.

ಜಿಲ್ಲಾ ಪಂಚಾಯತಿಯ ಸಭಾಭವನದಲ್ಲಿ ನಡೆಸಿದ ಈ ಕಿರು ಸಭೆಯಲ್ಲಿ ಗೃಹ ರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ಶ್ರೀ ರಮೇಶ್, ಎನ್.ಡಿ.ಆರ್.ಎಫ್ ಟೀಮ್  ಕಮಾಂಡರ್  ಶ್ರೀ ಗೋಪಾಲ್ ಲಾಲ್ ಮೀನಾ, ಇನ್ಸ್ಟ್ರಕ್ಟರ್ ಶ್ರೀ ಶಿವಾನಂದ ಯಾದವ್,  ಶ್ರೀ ವಸುಧರ್, ಹೋಮ್ ಗಾರ್ಡ್ ಗೈಡ್ ಶ್ರೀ ಉಪೇಂದ್ರ,  ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ   ಶ್ರೀ ಸತೀಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ವಿಪತ್ತು ನಿರ್ವಹಣೆ ಅಧಿಕಾರಿ ಶ್ರೀ ವಿಜಯ್ ಪೂಜಾರ್, ವಿಪತ್ತು ನಿರ್ವಹಣೆ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ ಉಪಸ್ಥಿತರಿದ್ದರು.

Comments