ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಕ್ರಮ ಲೋಕಾರ್ಪಣೆ..
ಧರ್ಮಸ್ಥಳ: ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಲೋಕಾರ್ಪಣೆ ಹಾಗೂ ಬೆಳ್ತಂಗಡಿ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರಿಗೆ ಎನ್.ಡಿ.ಆರ್.ಎಫ್ ಮೂಲಕ ತರಬೇತಿ ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮ ಇಂದು ನೆರವೇರಿತು.
ಪೂಜ್ಯ ಖಾವಂದರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಹಾಗೂ ವಿಪತ್ತು ನಿರ್ವಹಣೆಗೆ ಅಗತ್ಯವಿರುವ ಪರಿಕರಗಳನ್ನು ಸ್ವಯಂಸೇವಕರಿಗೆ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಯೋಜನೆಯ ಟ್ರಸ್ಟಿಯವರಾದ ಶ್ರೀ ಸುರೇಂದ್ರ ಕುಮಾರ್, ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಹರೀಶ್ ಕುಮಾರ್, ಬೆಳ್ತಂಗಡಿ ತಾಲೂಕಿನ ತಹಶಿಲ್ದಾರರಾದ ಶ್ರೀ ಗಣಪತಿ ಶಾಸ್ತ್ರಿ, ಎನ್.ಡಿ.ಆರ್.ಎಫ್ 10 ನೇ ಬೆಟಾಲಿಯನ್ ನ ಟೀಮ್ ಕಮಾಂಡಿಂಗ್ ಆಫೀಸರ್ ಶ್ರೀ ಗೋಪಾಲ್ ಲಾಲ್ ಮೀನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನೆರವೇರಿತು.
ಮಾನ್ಯ ಸಿ.ಓ.ಓ ಅವರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್, ಕೇಂದ್ರ ಕಚೇರಿಯ ಎಲ್ಲಾ ಪ್ರಾದೇಶಿಕ ನಿರ್ದೇಶಕರು, ಕೇಂದ್ರ ಕಚೇರಿಯ ಎಲ್ಲಾ ನಿರ್ದೇಶಕರು, ಜನಜಾಗೃತಿ ವೇದಿಕೆಯ ನಿರ್ದೇಶಕರು, ತರಬೇತಿ ಸಂಸ್ಥೆಯ ನಿರ್ದೇಶಕರು, ಪ್ರಾಂಶುಪಾಲರು, ಬೆಳ್ತಂಗಡಿ ತಾಲ್ಲೂಕು ಯೋಜನಾಧಿಕಾರಿಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉದ್ಘಾಟನೆ ಕಾರ್ಯಕ್ರಮದ ನಂತರ ನೇತ್ರಾವತಿ ನದಿಯಲ್ಲಿ ಪ್ರಾತ್ಯಕ್ಷಿಕೆ ತರಬೇತಿ ನಡೆಯಿತು. ಪ್ರವಾಹದಲ್ಲಿ ಸಿಲುಕಿದ ವ್ಯಕ್ತಿಗಳನ್ನು ರಕ್ಷಿಸುವ ವಿವಿಧ ವಿಧಾನಗಳ ಬಗ್ಗೆ ಎನ್.ಡಿ.ಆರ್.ಎಫ್ ಸಿಬ್ಬಂದಿಗಳು ಸ್ವಯಂಸೇವಕರಿಗೆ ತರಬೇತಿ ನೀಡಿದರು.
ನದಿಯಲ್ಲಿ ನಡೆಯುವ ಕಾರ್ಯಾಚರಣೆ ವಿಧಾನಗಳ ತರಬೇತಿಯನ್ನು ಪೂಜ್ಯರು, ಮಾತೃಶ್ರೀ ಅಮ್ಮನವರು ಹಾಗೂ ಪೂಜ್ಯರ ಕುಟುಂಬದ ಸದಸ್ಯರು ವೀಕ್ಷಿಸಿದರು.
ಸ್ವಯಂಸೇವಕರು ತರಬೇತಿಯಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡು ಮೊದಲ ದಿನದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ.
ನಮಗೂ ಅಸೆ ಇದೇ ಸ್ವಯಂ ಸೇವರಾಗೋಕೆ
ReplyDelete