ಬೆಳ್ತಂಗಡಿ ಹಾಗೂ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ವಿಪತ್ತು ನಿರ್ವಹಣೆ ಸ್ವಯಂಸೇವಕರ ತರಬೇತಿ ಕಾರ್ಯಾಗಾರ ಸಂಪನ್ನ..


ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಅಡಿಯಲ್ಲಿ ಎನ್.ಡಿ.ಆರ್.ಎಫ್ ತಂಡದ ಮೂಲಕ ನಡೆದ ತರಬೇತಿ ಕಾರ್ಯಾಗಾರ ಇಂದು ಸಂಪನ್ನಗೊಂಡಿತು. 

ಬೆಳ್ತಂಗಡಿ ತಾಲ್ಲೂಕು ಘಟಕ ಹಾಗೂ ಗುರುವಾಯನಕೆರೆ ತಾಲ್ಲೂಕು ಘಟಕದ ಒಟ್ಟು 100 ಸ್ವಯಂಸೇವಕರು ತರಬೇತಿ ಪಡೆದುಕೊಂಡಿರುತ್ತಾರೆ.
ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ಬದುಕು ಕಟ್ಟೋಣ ಬನ್ನಿ ಕಾರ್ಯಕ್ರಮದ ರೂವಾರಿ ಶ್ರೀ ರಾಜೇಶ್ ಪೈ, ಗ್ರಾಮಾಭಿವೃದ್ಧಿ ಯೋಜನೆಯ ಸಿ.ಓ.ಓ ಶ್ರೀ ಅನಿಲ್ ಕುಮಾರ್ ಎಸ್.ಎಸ್, ಎನ್.ಡಿ.ಆರ್.ಎಫ್ ನ  ಟೀಮ್ ಕಮಾಂಡಿಂಗ್ ಆಫೀಸರ್  ಶ್ರೀ ಗೋಪಾಲ್ ಲಾಲ್ ಮೀನಾ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಶ್ರೀ ವಿಜಯ್ ಕುಮಾರ್ ಪೂಜಾರ್,  ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕರಾದ ಶ್ರೀ ಬೂದಪ್ಪ ಗೌಡ, ಎನ್.ಡಿ.ಆರ್.ಎಫ್ ಸಿಬ್ಬಂದಿಗಳು, ಹೋಮ್ ಗಾರ್ಡ್ ಗೈಡ್ ಶ್ರೀ ಉಪೇಂದ್ರ ಉಪಸ್ಥಿತರಿದ್ದರು.
ಇದೇ ವೇಳೆ ನಾಲ್ಕು ದಿನಗಳವರೆಗೆ ಒಟ್ಟು 100 ಸ್ವಯಂಸೇವಕರಿಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿಯನ್ನು ನೀಡಿದ ಎನ್.ಡಿ.ಆರ್.ಎಫ್ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Comments