ಆರೋಗ್ಯ ತಪ್ಪಿದ ವ್ಯಕ್ತಿಗೆ ಸಕಾಲದಲ್ಲಿ ಸ್ಪಂದಿಸಿದ ವಿಪತ್ತು ನಿರ್ವಹಣೆ ಸ್ವಯಂಸೇವಕ..


ಗುರುವಾಯನಕೆರೆ: ತುರ್ತಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕಿದ್ದ ವ್ಯಕ್ತಿಯೋರ್ವರಿಗೆ ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ 'ಗುರುವಾಯನಕೆರೆ ವಿಪತ್ತು ನಿರ್ವಹಣಾ ಘಟಕ'ದ ಸ್ವಯಂಸೇವಕರಾದ ಧರ್ಮಪ್ಪಗೌಡ.

ಮೆಚ್ಚಿನ ಗ್ರಾಮದವರಾದ ಇವರಿಗೆ ರಾತ್ರಿ ಒಂಭತ್ತುವರೆ ಗಂಟೆಗೆ ಪಕ್ಕದ ಊರು ತಣ್ಣೀರುಪಂಥದಿಂದ ಸ್ನೇಹಿತರೋರ್ವರಿಂದ  ಕರೆ ಬಂದಿದೆ.

“ದಮ್ಮು ವಿಪರೀತ ಬಾಧಿಸುತ್ತಿರುವ ವ್ಯಕ್ತಿಯೋರ್ವರು ಉಸಿರಾಡಲು ತೀವ್ರ ಕಷ್ಟಪಡುತ್ತಿದ್ದಾರೆ. ಬಹಳ ತೊಂದರೆಯಲ್ಲಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕಿದೆ. ಇಲ್ಲವಾದಲ್ಲಿ ತೊಂದರೆಯಾಗಬಹುದು” ಆತಂಕ ತುಂಬಿದ ಮಾತು ಅತ್ತ ಕಡೆಯಿಂದ.

 “ಆಸ್ಪತ್ರೆಗೆ ಕರೆದೊಯ್ಯಲು ವಾಹನ ಸಿಗುತ್ತಿಲ್ಲ. ವ್ಯವಸ್ಥೆ ಮಾಡಬಹುದೇ?”  ವಿನಂತಿಯೂ ಮಾತಿನ ಕೊನೆಯಲ್ಲಿತ್ತು. 

ಕೂಡಲೇ ಸ್ಪಂದಿಸಿದ ಧರ್ಮಪ್ಪ ಗೌಡ ಅವರು ತನ್ನ ಸ್ನೇಹಿತನಿಗೆ ಕರೆ ಮಾಡಿ ವಾಹನದ ವ್ಯವಸ್ಥೆ ಮಾಡಿದ್ದಾರೆ.
ವಾಹನ ಕೊಂಡೊಯ್ದು ಸ್ನೇಹಿತ ತಡಮಾಡದೆ ರೋಗಿಯನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ದೊರೆತಿದ್ದರಿಂದ ರೋಗಿಯ ಉಸಿರಾಟದ ಸ್ಥಿತಿ ಸಹಜವಾಗಿದೆ ಮತ್ತು ದಮ್ಮು ಕಡಿಮೆಯಾಗಿದೆ. 

ಅನಾರೋಗ್ಯ ಪೀಡಿತ ವ್ಯಕ್ತಿಯ ಕುಟುಂಬದವರು ಆಸ್ಪತ್ರೆಯಿಂದ  ಮನೆಗೆ ಮರಳುವವರೆಗೆ ದೂರವಾಣಿ ಸಂಪರ್ಕದಲ್ಲಿದ್ದು ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.

ಸಕಾಲದಲ್ಲಿ ಕಷ್ಟಕ್ಕೆ ಸ್ಪಂದಿಸಿದ ಧರ್ಮಪ್ಪ ಗೌಡ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

28.06.2020

Comments

Post a Comment