ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೋರ್ವರನ್ನು ಆ 

ಕಿನ ಕೋಡಿಯಲ್ಲಿ ನಡೆದಿದೆ ಕಾಲಡಿಯಲ್ಲಿ ಸುಮಾರು ಎಂಟು ಮನೆಗಳಿವೆ ಅಲ್ಲಿ ನೆಲೆ ನಿಂತಿರುವ ಕುಟುಂಬಗಳು ನಗರಕ್ಕೆ ತೆರಳಬೇಕೆಂದರೆ ಅಣಿಯೂರು ಗ್ರಾಮಕ್ಕೆ ಬಂದು ತೆರಳಬೇಕು ಕೋಲೋಡಿ ಮತ್ತು ಅಣಿಯೂರಿನ ಮಧ್ಯೆ ಒಂದು ನದಿ ಇದೆ. ನದಿಯನ್ನು ದಾಟಿ ಬರಬೇಕಾದ ಅನಿವಾರ್ಯತೆ ಅಲ್ಲಿನವರು ಈಗ ಮಳೆಗಾಲವಾಗಿದ್ದರಿಂದ ನದಿಯಲ್ಲಿ ನೀರು ರಭಸದಿಂದ ಹರಿಯುತ್ತಿದೆ ನದಿಗಿಳಿದು ದಾಟಲು ಅಸಾಧ್ಯ ಇದಕ್ಕಾಗಿ ಮರದ ದಿಮ್ಮಿ ಯೊಂದನ್ನು ಬಳಸಿ ಚಿಕ್ಕ ಸೇತುವೆಯನ್ನು ಗ್ರಾಮಸ್ಥರೇ ಸೇರಿ ರಚಿಸಿಕೊಂಡಿದ್ದಾರೆ ಈ ಮರದ ದಿಮ್ಮಿಯ ಮೇಲಿನ ನಡಿಗೆ ತ್ರಾಸದಾಯಕ ವೃದ್ಧರು ಚಿಕ್ಕಮಕ್ಕಳು ತೆರಳಲು ಅಸಾಧ್ಯ ನೆಲಮಟ್ಟದಿಂದ ಹದಿನೈದು ಅಡಿಗಳಷ್ಟು ಎತ್ತರದಲ್ಲಿರುವ ಈ ಮರದ ಸೇತುವೆಯ ಮೇಲೆ ಸರಾಗ ಅಡ್ಡಾಡು ವಿಕೆ ಕಠಿಣ.
 ನದಿಯಾಚೆಗಿನ ಕೋಡಿಯಲ್ಲಿರುವ ಕುಟುಂಬವೊಂದರಲ್ಲಿ ಪ್ರತಿಯೊಬ್ಬರಿಗೆ ಅನಾರೋಗ್ಯದ ನಿಮಿತ್ತ ತುರ್ತಾಗಿ ಆಸ್ಪತ್ರೆಗೆ ಸಾಗಿಸಬೇಕಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ವಿಪತ್ತು ನಿರ್ವಹಣೆಯ ಘಟಕದ ಸ್ವಯಂ ಸೇವಕ ವಿಶ್ವನಾಥ್ ಅಣಿಯೂರು ಸ್ವಪ್ರೇರಣೆಯಿಂದ ಕುಟುಂಬದ ಮನೆಗೆ ತೆರಳಿದ್ದಾರೆ ಎಂಭತ್ತೈದು ವರ್ಷದ ರದ್ದಿಗೆ ನಡೆಯಲು ಆಗುತ್ತಿರಲಿಲ್ಲ ಕುರ್ಚಿಯಲ್ಲಿ ಕುಳ್ಳಿರಿಸಿಕೊಂಡು ಎತ್ತಿಕೊಂಡು ತೆರಳಬೇಕು ಕಿರಿದಾದ ಸೇತುವೆಯ ಮೇಲೆ ನಡೆದು ನದಿ ದಾಟಿ ಆಸ್ಪತ್ರೆಗೆ ಸಾಗಿಸಬೇಕು ಇನ್ನೊಬ್ಬರನ್ನು ಹೊತ್ತುಕೊಂಡು ಕಿರು ಸೇತುವೆಯ ಮೇಲೆ ನಡಿಗೆ ಮಾಡುವುದು ಅಪಾಯವಾದರೂ  ಅಲ್ಲಿರುವವರಿಗೆ ಧೈರ್ಯ ತುಂಬಿ ವೃದ್ಧೆಯನ್ನು ಹೊತ್ತುಕೊಂಡು ಸೇತುವೆಯನ್ನು ದಾಟಿಸಿ ಸುಳ್ಯದ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
 ವಯೋವೃದ್ಧೆಯ ಕುಟುಂಬದವರಿಗೆ ನೆರವಾಗಿರುವ ಸದಾಶಿವ ಅವರು ಮಾನವೀಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

Comments