ದ.ಕ ಜಿಲ್ಲಾಧಿಕಾರಿಯವರ ಭೇಟಿ; ಸ್ವಯಂಸೇವಕರ ತರಬೇತಿ ಆಯೋಜನೆಗೆ ನೆರವಿನ ಭರವಸೆ..

ಮಂಗಳೂರು:(06.06.2020)  ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಅಡಿಯಲ್ಲಿ ವಿಪತ್ತು ನಿರ್ವಹಣೆ ಸ್ವಯಂಸೇವಕರ ತರಬೇತಿಯನ್ನು NDRF(National Disaster Response Force) ಮೂಲಕ ನಡೆಸುವ ಉದ್ದೇಶದಿಂದ, ಗೌರವಾನ್ವಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಮಾರ್ಗದರ್ಶನದಂತೆ  ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಾದ ಸಿಂಧು ಬಿ.ರೂಪೇಶ್ ಅವರನ್ನು ಭೇಟಿ ಮಾಡಲಾಯಿತು. 

ಮಾನ್ಯ ಮುಖ್ಯ ನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಉದ್ದೇಶ ಹಾಗೂ ಅನುಷ್ಠಾನದ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಚರ್ಚಿಸಿ ಕಾರ್ಯಕ್ರಮದ ಉದ್ಘಾಟನೆಗೆ ಆಹ್ವಾನಿಸಿದರು. 

ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಕೃಷಿಯಂತ್ರಧಾರೆ ಕಾರ್ಯಕ್ರಮದ ಕುರಿತು ಇದೇ ವೇಳೆ ಚರ್ಚಿಸಿದರು.ನಂತರ ಗ್ರಾಮಾಭಿವೃದ್ಧಿ ಯೋಜನೆಯ ವಾರ್ಷಿಕ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ನೀಡಲಾಯಿತು.

'ಪ್ರಸ್ತುತ ದಿನಮಾನದಲ್ಲಿ ಸ್ಥಳೀಯರು ವಿಪತ್ತು ನಿರ್ವಹಣೆಗೆ ಮುಂದಾಗುವುದು  ತೀರಾ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಯಂಸೇವಕರನ್ನು ಗುರುತಿಸಿ ತರಬೇತಿಯನ್ನು ನೀಡಿ ವಿಪತ್ತು ನಿರ್ವಹಣಾ ತಜ್ಞರನ್ನಾಗಿ ರೂಪಿಸಲು ತೊಡಗಿರುವುದು ಉತ್ತಮ ಬೆಳವಣಿಗೆ. ಧರ್ಮಸ್ಥಳ ಯೋಜನೆ  ಅನುಷ್ಠಾನ ಮಾಡುವ ಸ್ವಯಂಸೇವಕರ ತರಬೇತಿಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡುತ್ತೇವೆ' ಎಂದು ಜಿಲ್ಲಾಧಿಕಾರಿ ಯವರು ಭರವಸೆ ನೀಡಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ, ಜಿಲ್ಲಾ ಪಂಚಾಯತಿಯ  ದ.ಕ ಜಿಲ್ಲಾ ವಿಪತ್ತು ನಿರ್ವಹಣೆ ಸಮನ್ವಯಾಧಿಕಾರಿ ಶ್ರೀ ವಿಜಯ್ ಪೂಜಾರ್ ಉಪಸ್ಥಿತರಿದ್ದರು.

Comments