ಉಜಿರೆಯಲ್ಲಿ ಸ್ವಯಂಸೇವಕರ ಆಯ್ಕೆಯ ಕಿರು ಸಭೆ..

ಉಜಿರೆ:(08.06.2020)ವಿಪತ್ತು ನಿರ್ವಹಣೆ ಸ್ವಯಂಸೇವಕರ ಬೆಳ್ತಂಗಡಿ ತಾಲ್ಲೂಕು ಘಟಕಕ್ಕೆ ಆಯ್ಕೆಯಾದ  ಸ್ವಯಂಸೇವಕರನ್ನು ಭೇಟಿ ಮಾಡಿ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಯಿತು. 

ಉಜಿರೆಯ ರವೀಂದ್ರ ನಾಯ್ಕ, ಸಂದೇಶ್ ಎಮ್, ಗುರುರಾಜ್ ಗುರಿಪಳ್ಳ ಅವರನ್ನು ಸ್ವಯಂ ಸೇವಕರನ್ನಾಗಿ ಗುರುತಿಸಿದ್ದು ಜೂನ್ ಮೂರನೇಯವಾರ  ಎನ್.ಡಿ.ಆರ್.ಎಫ್ ಪಡೆಯಿಂದ ನಡೆಯುವ ತರಬೇತಿಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಯಿತು. 

ವಿಪತ್ತು ನಿರ್ವಹಣೆಯ ಘಟಕಕ್ಕೆ ನಾವು ಸದಸ್ಯರಾಗುತ್ತಿರುವುದು ಹೆಮ್ಮೆಯ ಸಂಗತಿ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒದಗಿಸಿಕೊಡುತ್ತಿರುವ ಈ ಅವಕಾಶವನ್ನು ತಪ್ಪದೆ ಬಳಸಿಕೊಳ್ಳುತ್ತೇವೆ ಎಂದು ಸ್ವಯಂಸೇವಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಲಯ ಮೇಲ್ವಿಚಾರಕಿ ಶ್ರೀಮತಿ ಅಶ್ವಿತಾ, ಸೇವಾಪ್ರತಿನಿಧಿ ಶ್ರೀಮತಿ ಪ್ರೇಮಾ ಉಪಸ್ಥಿತರಿದ್ದರು.

Comments