ಗುರುವಾಯನಕೆರೆಯಲ್ಲಿ ಸ್ವಯಂಸೇವಕರ ಆಯ್ಕೆಗೆ ಕಿರು ಸಭೆ..

ಅಳದಂಗಡಿ:(08.06.2020) ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಅಳದಂಗಡಿ ಗ್ರಾಮದಲ್ಲಿ ವಿಪತ್ತು ನಿರ್ವಹಣೆ ಸ್ವಯಂಸೇವಕರ ಆಯ್ಕೆ ಕುರಿತಂತೆ ಕಿರು ಸಭೆ ನಡೆಸಲಾಯಿತು.

ವಿಪತ್ತು ನಿರ್ವಹಣೆ ಸಂಯೋಜಕರಾದ ಶ್ರೀ ಶ್ರೀಕಾಂತ್ ಪಟವರ್ಧನ್ ಯೋಜನೆಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಎಂಟು ಸದಸ್ಯರು ಭಾಗವಹಿಸಿದ್ದು ತಾಲೂಕು ಘಟಕದ ಸ್ವಯಂಸೇವಕರನ್ನಾಗಿ ಐದು ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಬಡೆಗಕಾರಂದೂರು ಎ ಒಕ್ಕೂಟದ ಅಧ್ಯಕ್ಷರಾದ ಶ್ರೀ ಮಂಜುನಾಥ ಆಚಾರ್ಯ, ಬಿ. ಒಕ್ಕೂಟದ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ಯ, ಸೇವಾಪ್ರತಿನಿಧಿ ಸವಿತಾ ಎನ್ ಹಾಗೂ ಸುಲೋಚನ ಉಪಸ್ಥಿತರಿದ್ದರು.

Comments