ಹೊಸಂಗಡಿಯಲ್ಲಿ ಸ್ವಯಂಸೇವಕರ ಆಯ್ಕೆ ಸಭೆ

ಗುರುವಾಯನಕೆರೆ: ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಅಡಿಯಲ್ಲಿ ಹೊಸಂಗಡಿ ವಲಯದ ಹೊಕ್ಕಾಡಿಗೋಳಿಯಲ್ಲಿ ಸ್ವಯಂಸೇವಕರ ಆಯ್ಕೆ ಕುರಿತಂತೆ ಕಿರು ಸಭೆ ನಡೆಸಲಾಯಿತು.

ವಿಪತ್ತು ನಿರ್ವಹಣೆ ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಜಯಶೀಲಾ ಉಮೇಶ್ ಪೂಜಾರಿ ಅವರು ಯೋಜನೆಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಪ್ರತ್ಯೇಕವಾಗಿ ಎರಡು ಸ್ಥಳದಲ್ಲಿ ನಡೆದ ಸಭೆಯಲ್ಲಿ ಒಟ್ಟು 13 ಸದಸ್ಯರು ಭಾಗವಹಿಸಿದ್ದರು. 

ಸ್ವಯಂ ಸೇವಕರ ತಂಡದಲ್ಲಿ 2 ಈಜು ಪರಿಣಿತರು, 3 ಇಲೆಕ್ಟ್ರಿಶಿಯನ್ , 2 ಮರ ಏರುವ ತಜ್ಞರು, 2 ಮೇಸ್ತ್ರಿ ಗಳು, 4 ಕೃಷಿಕರು ಇರುವುದು ವಿಶೇಷ.

ದಿನಾಂಕ: 09-06-2020

Comments