ಹೊಸಂಗಡಿ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರು ಹಾಗೂ ಸ್ಥಳೀಯರಿಂದ ರಸ್ತೆ ರಿಪೇರಿ ಶ್ರಮದಾನ..



ಗುರುವಾಯನಕೆರೆ: ಹೊಸಂಗಡಿ ವಲಯದ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರು ಹಾಗೂ ಸ್ಥಳೀಯರು ರಸ್ತೆ ರಿಪೇರಿ ಶ್ರಮದಾನ ನಡೆಸಿದರು.

ಸ್ವಯಂಸೇವಕರಾದ ಶ್ರೀ ಅರುಣ್ ಹೆಗ್ಡೆ ಅವರು ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳ ಸದಸ್ಯರು ಹಾಗೂ ಸ್ಥಳೀಯರ ನೆರವಿನಿಂದ ನಡೆದ ಕರಿಮನೆಳು ನೂಯಿದಾಗೂಳಿ ರಸ್ತೆಯಲ್ಲಿ ನಡೆದ ಶ್ರಮದಾನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

 ರಸ್ತೆ ರಿಪೇರಿ ಕೆಲಸ ನಿರ್ವಹಿಸಿದ ಸದಸ್ಯರಿಗೆ ಉಪಹಾರದ ವ್ಯವಸ್ಥೆಯನ್ನು ವಿಪತ್ತು ನಿರ್ವಹಣೆ ಘಟಕದ  ಸ್ವಯಂಸೇವಕರಾದ ಅರುಣ್ ಹೆಗ್ಡೆ ಹಾಗೂ ಗೌತಮ್ ದಾಸ್ ಅವರು ಮಾಡಿರುತ್ತಾರೆ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರಾದ ಶ್ರೀಮತಿ ಭಾರತಿ ಹೆಗ್ಡೆ ಅವರು ಮಾಡಿರುತ್ತಾರೆ.

                        ******

Comments