ಡೆಂಗ್ಯೂ ಕುರಿತು ಮಾಹಿತಿ ಕಣಿಯೂರು ವಿಪತ್ತು ನಿರ್ವಹಣೆ ಘಟಕದಿಂದ..

ಗುರುವಾಯನಕೆರೆ,ಜುಲೈ 25: ವಿಪತ್ತು ನಿರ್ವಹಣೆಯ ಕುರಿತು ಸಮುದಾಯಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ನೀಡುವ ಸಭೆಯನ್ನು ಕಣಿಯೂರು ವಿಪತ್ತು ನಿರ್ವಹಣಾ ಘಟಕದಿಂದ ಬಂದಾರು ಗ್ರಾಮದ ಬೊಲ್ಜೆ ಎಂಬಲ್ಲಿ ನಡೆಸಲಾಯಿತು.

ವಿಪತ್ತು ನಿರ್ವಹಣೆ ಸಂಯೋಜಕಿ ಶ್ರೀಮತಿ ಚಂದ್ರಕಲಾ ಅವರು  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಆರಂಭಿಸಿದ  
ವಿಪತ್ತು ನಿರ್ವಹಣೆಯ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಅಲ್ಲದೇ ಡೆಂಗ್ಯೂ ರೋಗದ ಕುರಿತು ಮಾಹಿತಿ ನೀಡಿದರು. ರೋಗಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳುವುದು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ವಿಪತ್ತು ನಿರ್ವಹಣಾ ಘಟಕದ ಕಣಿಯೂರಿನ ಸ್ವಯಂಸೇವಕರು ಸಾಮಾಜಿಕ ಸೇವಾಕಾರ್ಯ ಮಾಡುತ್ತಿರುವ ಸಂದರ್ಭಗಳಲ್ಲಿ ಸಾರ್ವಜನಿಕರು ನಮ್ಮ ತಂಡದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡರು.

Comments