ಗುರುವಾಯನಕೆರೆ ವಲಯದ ವಿಪತ್ತು ನಿರ್ವಹಣೆ ಸ್ವಯಂಸೇವಕರಿಂದ ಗಿಡ ನಾಟಿ ಕಾರ್ಯಕ್ರಮ



ಗುರುವಾಯನಕೆರೆ: (23.07.2020) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ವಲಯದ ವಿಪತ್ತು ನಿರ್ವಹಣೆ  ಘಟಕದ ಸದಸ್ಯರು ಇಂದು ಪೆರೋಡಿತ್ತಾಯಕಟ್ಟೆಯ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಆಟದ ಮೈದಾನದಲ್ಲಿ ಅರಣ್ಯ ಗಿಡಗಳನ್ನು ನಾಟಿ ಮಾಡಿದರು.

ಅರಣ್ಯ ಇಲಾಖೆ, ಹಿರಿಯ ಪ್ರಾಥಮಿಕ ಶಾಲೆ ಯ ಸಹಯೋಗದೊಂದಿಗೆ ನಡೆದ ಗಿಡನಾಟಿ ಕಾರ್ಯಕ್ರಮದಲ್ಲಿ ನಾಟಿಗೆ ಅಗತ್ಯವಿರುವ ಗಿಡಗಳನ್ನು  ಅರಣ್ಯ ಇಲಾಖೆಯು ನೀಡಿದೆ.


ಗುರುವಾಯನಕೆರೆ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಶ್ರೀ ಕಾಸೀಂ ಅವರು ಮಹಾಗನಿ ಗಿಡವನ್ನು ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ನಾಟಿ ಮಾಡಿದ ಗಿಡಗಳಿಗೆ ಹಾನಿಯಾಗದಂತೆ ರಕ್ಷಿಸಲು ಬಿದಿರಿನ ಬೊಂಬುಗಳನ್ನು ನಿಲ್ಲಿಸಿ ರಕ್ಷಣಾ ಕವಚ ರಚಿಸಲು ಉದ್ದೇಶಿಸಲಾಗಿದೆ.

ವಿಪತ್ತು ನಿರ್ವಹಣೆ ಸಂಯೋಜಕಿ ಶ್ರೀಮತಿ ಸವಿತಾ ಪಿರೇರ, ಸ್ವಯಂ ಸೇವಕರಾದ ಶ್ರೀ ವಿಶ್ವನಾಥ್, ಶ್ರೀ ಪ್ರಮೋಧರ, ಶ್ರೀ ಮುರಳೀಧರ, ಶ್ರೀ ಜಗದೀಶ್, ಶ್ರೀ ಸುನೀಲ್, ಶ್ರೀ ಸಂತೋಷ್ ಶ್ರಮದಾನ ಮಾಡಿದರು.


ವಿಪತ್ತು ನಿರ್ವಹಣೆ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ, ಗುರುವಾಯನಕೆರೆ  ವಲಯ ಮೇಲ್ವಿಚಾರಕರಾದ ಶ್ರೀ ದಿನೇಶ್ ಈ ಸಂದರ್ಭ ಉಪಸ್ಥಿತರಿದ್ದರು.

                       *********

Comments