ಗುರುವಾಯನಕೆರೆ ವಿಪತ್ತು ನಿರ್ವಹಣೆ ಘಟಕದಿಂದ ವೇಣೂರು ಪೋಲಿಸ್ ಠಾಣೆ ಭೇಟಿ..
ಗುರುವಾಯನಕೆರೆ, ಜುಲೈ 24: ವಿಪತ್ತು ನಿರ್ವಹಣಾ ಘಟಕ ಗುರುವಾಯನಕೆರೆಯ ವಿಪತ್ತು ನಿರ್ವಹಣೆ ಸ್ವಯಂಸೇವಕರು ಇಂದು ವೇಣೂರು ಪೊಲೀಸ್ ಠಾಣೆಗೆ ಭೇಟಿ ನೀಡಿದರು.
ವಿಪತ್ತು ನಿರ್ವಹಣೆ ಕಾರ್ಯಕ್ರಮ ಹಾಗೂ ತಾವು ನಿರ್ವಹಿಸುತ್ತಿರುವ ಸಾಮಾಜಿಕ ಸೇವಾಕಾರ್ಯದ ಕುರಿತಾಗಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಠಾಣೆಯ ASI ಶ್ರೀಯುತ ಗಿರಿಯಪ್ಪ ಅವರು ವಿಪತ್ತು ನಿರ್ವಹಣೆ ಸ್ವಯಂಸೇವಕರು ನಿರ್ವಹಿಸುತ್ತಿರುವ ಸೇವಾಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪೂಜ್ಯರು ಉತ್ತಮ ಯೋಜನೆಯನ್ನು ಸಮುದಾಯಕ್ಕೆ ಕೊಡುಗೆಯಾಗಿ ನೀಡಿದ್ದು ಸ್ವಯಂಸೇವಕರು ಅದನ್ನು ಸಮರ್ಪಕವಾಗಿ ಸಮಾಜಕ್ಕೆ ತಲುಪಿಸುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.
ಪೊಲೀಸ್ ಅಧಿಕಾರಿಗಳಾದ ಶ್ರೀ ವಿಜಯ ಕುಮಾರ್, ಶ್ರೀ ಕೃಷ್ಣ ನಾಯಕ್ ಮತ್ತು ಶ್ರೀ ವಿಜಯೇಂದ್ರ ಅವರು ಸ್ವಯಂಸೇವಕರ ಪರಿಚಯ ಮಾಡಿಕೊಂಡರು.
ವಿಪತ್ತು ನಿರ್ವಹಣೆ ಸಂಯೋಜಕಿ ಶ್ರೀಮತಿ ಸವಿತಾ ಪಿರೇರ, ಸ್ವಯಂಸೇವಕರಾದ ಶ್ರೀ ವಿಶ್ವನಾಥ್, ಶ್ರೀ ಪ್ರಮೋಧರ, ಶ್ರೀ ಮುರಳೀಧರ, ಶ್ರೀ ಜಗದೀಶ್, ಶ್ರೀ ಸುನೀಲ್, ಶ್ರೀ ಸಂತೋಷ್ ಅವರು ಭೇಟಿ ನೀಡಿದ ತಂಡದಲ್ಲಿದ್ದರು.
*******
Comments
Post a Comment