ತಣ್ಣೀರುಪಂಥ ವಿಪತ್ತು ನಿರ್ವಹಣಾ ಘಟಕದಿಂದ ಶಾಲೆ ಆವರಣದ ಸ್ವಚ್ಛತೆ ಕಾರ್ಯಕ್ರಮ..


ಗುರುವಾಯನಕೆರೆ,ಜುಲೈ 30: ತಣ್ಣೀರುಪಂಥ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳೀಯ ಸ್ವಸಹಾಯ ಸಂಘಗಳ ಸದಸ್ಯರು ಜೊತೆಯಾಗಿ ಇಂದು ಸರ್ಕಾರಿ ಪ್ರೌಢಶಾಲೆ ಕರಾಯಾದಲ್ಲಿ ಶಾಲಾ ಪರಿಸರದ ಸ್ವಚ್ಚತಾ ಕಾರ್ಯವನ್ನು ನಡೆಸಿದರು. 

ಶಾಲಾ ವ್ಯಾಪ್ತಿಯ ಪರಿಸರದ ಸ್ವಚ್ಚತಾ ಕಾರ್ಯವನ್ನು ಸ್ವಯಂ ಪ್ರೇರಣೆಯಿಂದ ನಡೆಸಿದ ಸ್ವಯಂಸೇವಕರು ಕಟ್ಟಡಕ್ಕೆ ಅಪಾಯವಾಗಿ ಪರಿಣಮಿಸುವ ಸಾಧ್ಯತೆ ಇರುವ ಮರದ ಗೆಲ್ಲುಗಳನ್ನು ತೆರವುಗೊಳಿಸಿದರು.

ಶಾಲೆಯ ಸುತ್ತಲೂ ಬೆಳೆದಿರುವ ಅನಗತ್ಯ ಹುಲ್ಲು, ಗಿಡಗಳನ್ನು ಸವರಿ ತೆರವುಗೊಳಿಸಿದರು. ಮಳೆಯ ನೀರು ಸರಳವಾಗಿ ಹರಿದುಹೋಗುವಂತೆ ಕಾಲುವೆಯನ್ನು ರಚಿಸಿದರು. 

ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಶ್ರೀ ಸುರೇಶ್, ಸ್ವಯಂಸೇವಕಿ ಶೋಭಾ, ಸ್ವಚ್ಚತಾ ಸೇನಾನಿ ಭಾರತಿ, ಒಕ್ಕೂಟದ ಅಧ್ಯಕ್ಷರಾದ ಶ್ರೀ ರಾಮಣ್ಣ ಗೌಡ ಮಾಜಿ ಅಧ್ಯಕ್ಷರಾದ ಶ್ರೀ ರಾಜಶೇಖರ್, ವಲಯ ಮೇಲ್ವಿಚಾರಕರಾದ ವಿದ್ಯಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಹರೀಣಿ, ಸೇವಾಪ್ರತಿನಿಧಿ ಸಂಧ್ಯಾ ಉಪಸ್ಥಿತರಿದ್ದರು.
                   ***

Comments