ವಿಪತ್ತು ನಿರ್ವಹಣೆ ಸ್ವಯಂಸೇವಕ ಹರೀಶ್ ಅವರಿಂದ ಉರಗ ಕಾರ್ಯಾಚರಣೆ
ಬೆಳ್ತಂಗಡಿ, ಜುಲೈ 31: ಉಜಿರೆಯ ಅಜಿತ್ ನಗರದಲ್ಲಿ ಐದು ದಿನದಿಂದ ಕಣ್ಣಿಗೆ ಕಾಣಿಸಿಕೊಂಡು ಸುತ್ತಮುತ್ತಲಿನ ಜನರನ್ನು, ದಾರಿಹೋಕರನ್ನು ಹೆಬ್ಬಾವು ವೊಂದು ಭಯಭೀತಗೊಳಿಸಿತ್ತು.
ಇಂದು ಪದೇ ಪದೇ ಕಣ್ಣಿಗೆ ಕಾಣಿಸಿಕೊಂಡು ಭಯ ಹುಟ್ಟಿಸಿದ ಈ ಹಾವನ್ನು ಹಿಡಿಯುವಂತೆ ಉಜಿರೆಯ ಸಮೃದ್ಧಿ ಮನೆಯ ರಾಜಗೋಪಾಲ್ ಅವರು ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರಾದ ಶ್ರೀ ಹರೀಶ್ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಕೂಡಲೇ ಸ್ಪಂದಿಸಿದ ಹರೀಶ್ ಅವರು ಸ್ಥಳಕ್ಕೆ ಧಾವಿಸಿ ಹೆಬ್ಬಾವನ್ನು ಸೆರೆಹಿಡಿದು ಅರಣ್ಯಕ್ಕೆ ಬಿಟ್ಟು ಬಂದಿರುತ್ತಾರೆ.
Comments
Post a Comment