ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀ ಶರತ್ ಅವರ ಭೇಟಿ..



ಬೆಳ್ತಂಗಡಿ, ಜುಲೈ 29: ಬೆಳ್ತಂಗಡಿ ತಾಲೂಕಿನ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ ಆಯೋಜನೆ ಪ್ರಯುಕ್ತ, ಸ್ವಚ್ಚತಾ ಕಾರ್ಯಕ್ರಮಕ್ಕೆ ಸಹಕಾರ ಕೋರಿ ಮನವಿ ಮಾಡಿಕೊಳ್ಳಲು ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀ ಶರತ್ ಅವರನ್ನು ಭೇಟಿ ಮಾಡಲಾಯಿತು.

 ಜನಜಾಗೃತಿ ನಿರ್ದೇಶನಾಲಯದ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸೆಂಟ್ ಪಯಸ್ ಅವರು  ಕಾರ್ಯಕ್ರಮದ ಪೂರ್ವ ಸಿದ್ದತೆಯ ಕುರಿತು ಚರ್ಚಿಸಿದರು.

ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಯವರಾದ ಶ್ರೀ ಜಯಕರ ಶೆಟ್ಟಿ, ಜನಜಾಗೃತಿ ಕಾರ್ಯಕ್ರಮದ ಯೋಜನಾಧಿಕಾರಿಯವರಾದ ಶ್ರೀ ಚನ್ನಪ್ಪ ಗೌಡ, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ ಹಾಗೂ ಜನಜಾಗೃತಿ ಕಾರ್ಯಕ್ರಮದ ಸಿಬ್ಬಂದಿ ಶ್ರೀ ನವೀನ್ ಉಪಸ್ಥಿತರಿದ್ದರು.

Comments