ಕಣಿಯೂರು ಘಟಕದಿಂದ ಹ್ಯಾಂಡ್ ಸ್ಯಾನಿಟೈಸರ್ ಬಳಕೆಯ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ
ಗುರುವಾಯನಕೆರೆ,ಜುಲೈ 25: ವಿಪತ್ತು ನಿರ್ವಹಣೆಯ ಕುರಿತು ಸಮುದಾಯಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ನೀಡುವ ಸಭೆಯನ್ನು ಕಣಿಯೂರು ವಿಪತ್ತು ನಿರ್ವಹಣಾ ಘಟಕದಿಂದ ಮೊಗ್ರೂ ಗ್ರಾಮದ ಮುಗೇರಡ್ಕ ಎಂಬಲ್ಲಿ ನಡೆಸಲಾಯಿತು.
ವಿಪತ್ತು ನಿರ್ವಹಣೆ ಸಂಯೋಜಕಿ ಶ್ರೀಮತಿ ಚಂದ್ರಕಲಾ ಅವರು ಕರೋನ ಬಾಧಿಸುತ್ತಿರುವ ಇಂದಿನ ದಿನಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಳಕೆ, ಸೋಪಿನಿಂದ ಆಗಾಗ್ಗೆ ಕೈ ತೊಳೆದುಕೊಳ್ಳುವುದು, ಮಾಸ್ಕ್ ಬಳಕೆ, ಮಾಸ್ಕ್ ಸ್ವಚ್ಛತೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಆರಂಭಿಸಿದ ವಿಪತ್ತು ನಿರ್ವಹಣೆಯ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ವಿಪತ್ತು ನಿರ್ವಹಣಾ ಘಟಕದ ಕಣಿಯೂರಿನ ಸ್ವಯಂಸೇವಕರು ಸಾಮಾಜಿಕ ಸೇವಾಕಾರ್ಯ ಮಾಡುತ್ತಿರುವ ಸಂದರ್ಭಗಳಲ್ಲಿ ಸಾರ್ವಜನಿಕರು ನಮ್ಮ ತಂಡದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡರು.
Comments
Post a Comment