ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರಿಂದ ವಿಪತ್ತು ನಿರ್ವಹಣೆ ಸ್ವಯಂಸೇವಕರ ಭೇಟಿ
ಗುರುವಾಯನಕೆರೆ, ಜುಲೈ 26: ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರು ಹಾಗೂ ಸ್ಥಳೀಯ ಯುವಕರು ಇಂದು ಜಂತಿಗೋಳಿ ಆಟದ ಮೈದಾನದ ಸ್ವಚ್ಛತಾ ಕಾರ್ಯದ ಶ್ರಮದಾನ ನೆರವೇರಿಸಿದರು.
ವಿಪತ್ತು ನಿರ್ವಹಣಾ ಘಟಕದ ಹಾಗೂ ಸ್ಥಳೀಯ ಯುವಕರ ಮಾದರಿ ಕಾರ್ಯವನ್ನು ಗಮನಿಸಿದ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರು ಸ್ವಯಂ ಸೇವಕ ರನ್ನು ಭೇಟಿ ಮಾಡಿ ಸೇವಾಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ವಿಕಿತ್ ಶೆಟ್ಟಿ, ಶ್ರೀ ಸಚಿನ್, ಶ್ರೀ ರಕ್ಷಿತ್, ಶ್ರೀ ದೀಪಕ್, ಶ್ರೀ ಪೂಜೇಶ್, ಶ್ರೀ ಶಿವಪ್ರಸಾದ್, ಶ್ರೀ ಪ್ರಶಾಂತ್ ಆಚಾರ್ಯ ಮತ್ತು ಅಂಡಿಂಜೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀ ಜಗದೀಶ್ ಹೆಗ್ಡೆ ಅವರ ನೇತೃತ್ವದಲ್ಲಿ ಸ್ವಚ್ಛತೆ ಕಾರ್ಯ ಯಶಸ್ವಿಯಾಗಿ ನಡೆಯಿತು.
******
Comments
Post a Comment