ಬೆಳ್ತಂಗಡಿ ತಾಲೂಕು ತಹಶಿಲ್ದಾರರ ಭೇಟಿ..



ಬೆಳ್ತಂಗಡಿ, ಜುಲೈ 29: ಬೆಳ್ತಂಗಡಿ ತಾಲೂಕಿನ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ ಆಯೋಜನೆ ಪ್ರಯುಕ್ತ, ಕಾರ್ಯಕ್ರಮಕ್ಕೆ ಆಹ್ವಾನಿಸಲು ಬೆಳ್ತಂಗಡಿ ತಾಲೂಕಿನ  ತಹಶಿಲ್ದಾರರಾದ ಶ್ರೀಯುತ ಮಹೇಶ್ ಅವರನ್ನು   ಜನಜಾಗೃತಿ ನಿರ್ದೇಶನಾಲಯದ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸೆಂಟ್ ಪಯಸ್ ಅವರು ಭೇಟಿ ನೀಡಿದರು.

ಯೋಜನೆಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಬಗ್ಗೆ ವಿವರಿಸಿ, ತಾಲೂಕಿನಲ್ಲಿ ಸಂಭವಿಸಿದ ವಿಪತ್ತುಗಳ ಸಮಯದಲ್ಲಿ ಸೇವೆ ಸಲ್ಲಿಸಲು ಸಿದ್ಧರಿರುವ ನೂರು ಸ್ವಯಂಸೇವಕರನ್ನೊಳಗೊಂಡ  ಎನ್.ಡಿ.ಆರ್.ಎಫ್ ಮೂಲಕ ತರಬೇತಿ ಪಡೆದ ಸಮರ್ಥವಾದ ತಂಡ ಸಿದ್ಧವಿದ್ದು, ಕೇವಲ ವಿಪತ್ತು ನಿರ್ವಹಣೆ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡ ರೀತಿಯ ಬಗ್ಗೆ ವಿವರಿಸಿದರು.

ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಯವರಾದ ಶ್ರೀ ಜಯಕರ ಶೆಟ್ಟಿ, ಜನಜಾಗೃತಿ ಕಾರ್ಯಕ್ರಮದ ಯೋಜನಾಧಿಕಾರಿಯವರಾದ ಶ್ರೀ ಚನ್ನಪ್ಪ ಗೌಡ, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ ಹಾಗೂ ಜನಜಾಗೃತಿ ಕಾರ್ಯಕ್ರಮದ ಸಿಬ್ಬಂದಿ ಶ್ರೀ ನವೀನ್ ಉಪಸ್ಥಿತರಿದ್ದರು.

Comments