ಬೆಳ್ತಂಗಡಿಯಲ್ಲಿ ಅಮಾನವೀಯ ಘಟನೆ ನಡೆದ ಕುಟುಂಬ ಭೇಟಿ..

ಬೆಳ್ತಂಗಡಿ, ಜುಲೈ 21: ಇತ್ತೀಚೆಗೆ ವಯಸ್ಸಾದ ಅಜ್ಜಿಯನ್ನು ಮನೆಯಲ್ಲಿ ಹಿಂಸಿಸುವ ಒಂದು ವಿಡಿಯೋವೊಂದು ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ವರದಿಯಾಗಿತ್ತು .
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾದ ಈ ಅಮಾನವೀಯ ಘಟನೆಯ ವಸ್ತು ಸ್ಥಿತಿಯನ್ನು ಅರಿತುಕೊಳ್ಳಲು  ಜನಜಾಗೃತಿ ನಿರ್ದೇಶನಾಲಯದ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರು ಹಿಂಸೆಗೆ ಒಳಗಾಗಿರುವ ಅಜ್ಜಿ ವಾಸ್ತವ್ಯ ಇರುವ ಮನೆಯನ್ನು ಮನೆ ಭೇಟಿ ಮಾಡಿ ಅಜ್ಜಿಯ ಕುಶಲೋಪಚರಿ ವಿಚಾರಿಸಿದರು.
ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಶ್ರೀ ಜಯಕರ ಶೆಟ್ಟಿ, ಜನಜಾಗೃತಿ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀ ಚನ್ನಪ್ಪಗೌಡ, ವಿಪತ್ತು ನಿರ್ವಹಣೆ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ್, ಶ್ರೀ ನವೀನ್ ಮುಂತಾದವರು ಉಪಸ್ಥಿತರಿದ್ದರು.

                    ********

Comments