ಕಿಂಡಿ ಆಣೆಕಟ್ಟಿನಲ್ಲಿ ಸಿಲುಕಿದ ಮರಗಳ ತೆರವುಗೊಳಿಸಿ ಸಂಭವನೀಯ ಅಪಾಯವನ್ನು ತಪ್ಪಿಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು..

ಬೆಳ್ತಂಗಡಿ, ಜುಲೈ 27: ಕೊಕ್ಕಡ ಗ್ರಾಮದ ಸುದೆಗಂಡಿ ಎಂಬಲ್ಲಿ ಕಪಿಲಾ ನದಿಗೆ ಇರುವ ಕಿಂಡಿ ಆಣೆಕಟ್ಟಿನಲ್ಲಿ  ಸಿಲುಕಿದ ಮರಗಳನ್ನು ತೆರವುಗೊಳಿಸಿ ಸಂಭವನೀಯ ಅಪಾಯವನ್ನು ತಪ್ಪಿಸಿದ್ದಾರೆ ವಿಪತ್ತು ನಿರ್ವಹಣೆ ಸ್ವಯಂಸೇವಕರು.

ಮಳೆಯ ಕಾರಣದಿಂದ ಒಂದೆಡೆ ಸಂಗ್ರಹವಾಗಿರುವ ಮರದ ದಿಮ್ಮಿಗಳು ಹೊಳೆಗೆ ಅಡ್ಡಲಾಗಿ ಸಿಲುಕಿಕೊಂಡಿದ್ದವು. ಅವುಗಳನ್ನು ತೆರವುಗೊಳಿಸದಿದ್ದರೆ ಆಣೆಕಟ್ಟಿಗೆ ಅಪಾಯ ಎದುರಾಗುವ ಸಂಭವವಿತ್ತು.  ಹೀಗೆ  ಬಿದ್ದಿರುವ ಮರವನ್ನು ಸಣ್ಣದಾಗಿ ಕತ್ತರಿಸಿ ಹೊಳೆ ನೀರಿನ ಹರಿವನ್ನು ಸರಾಗಗೊಳಿಸಲಾಗಿದೆ.
ಸ್ವಯಂಸೇವಕರಾದ ಶ್ರೀ  ಜಗದೀಶ ಶಿಶಿಲ, ಶ್ರೀ ಶೀನಪ್ಪ ಶಿಶಿಲ, ಶ್ರೀ ಪ್ರಕಾಶ್ ಪಿ ಕೆ ರೆಕ್ಯ,
ಶ್ರೀ ನಾರಾಯಣ ಗೌಡ, ಶ್ರೀ ಗುರುಪ್ರಸಾದ್ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಗ್ರಾಮ ಪಂಚಾಯತಿ ಸದಸ್ಯರಾದ ಧರ್ಮರಾಜ್ ಅಡಕಾಡಿ ಶ್ರಮದಾನಕ್ಕೆ ಸಹಕರಿಸಿದರು.

ವಿಪತ್ತು ನಿರ್ವಹಣಾ ಸಂಯೋಜಕಿ ಶ್ರೀಮತಿ ಗಿರಿಜಾ ಎಸ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಅಶ್ವಿನಿ ಉಪಸ್ಥಿತರಿದ್ದರು.

Comments