ಕೊಕ್ಕಡ ವಲಯದ ವಿಪತ್ತು ನಿರ್ವಹಣಾ ಘಟಕದಿಂದ ಗಿಡನಾಟಿ ಕಾರ್ಯಕ್ರಮ..


ಬೆಳ್ತಂಗಡಿ, ಜುಲೈ 27: ಕೊಕ್ಕಡ ವಲಯದ ವಿಪತ್ತು ನಿರ್ವಹಣಾ ಘಟಕ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ಶ್ರಮದಾನದ ಮೂಲಕ ಗಿಡನಾಟಿ ಮಾಡಿದರು.
ಗಿಡನಾಟಿ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಯವರಾದ  ಶ್ರೀ ಜಯಕರ ಶೆಟ್ಟಿ ಯವರು ಉದ್ಘಾಟಿಸಿದರು. ಉಪ ವಲಯ ಅರಣ್ಯಾಧಿಕಾರಿ ಶ್ರೀ ಅಶೋಕ್, ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಶ್ರೀಧರ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರೂ ಆದ ಶ್ರೀ ಪ್ರಕಾಶ್ ರೆಖ್ಯಾ ,ಮೇಲ್ವಿಚಾರಕರಾದ ಶ್ರೀ ಸಚಿನ್ , ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಅಶ್ವಿನಿ , ಸಂಯೋಜಕರಾದ ಶ್ರೀಮತಿ ಗಿರಿಜಾ , ರೆಖ್ಯಾ ಸೇವಾಪ್ರತಿನಿಧಿ ಶ್ರೀಮತಿ ಸಂಧ್ಯಾ , & ಪ್ರಜ್ವಲ್ ,ಸ್ವಯಂಸೇವಕರಾದ ಜಗದೀಶ್ , ನಾರಾಯಣ , ಗುರುಪ್ರಸಾದ್ , ಶೀನಪ್ಪ , ಪ್ರಕಾಶ್ ,ಉಪಸ್ಥಿತರಿದ್ದರು.

Comments