ಶಿಶಿಲ ವಿಪತ್ತು ನಿರ್ವಹಣೆ ಘಟಕದಿಂದ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಶ್ರಮದಾನ..
ಬೆಳ್ತಂಗಡಿ, ಜುಲೈ 28: ಶಿಶಿಲ ವಿಪತ್ತು ನಿರ್ವಹಣೆ ಘಟಕದಿಂದ, ಸ್ವಚ್ಚತಾ ಸೇನಾನಿ ಹಾಗೂ ಸ್ಥಳೀಯ ಒಕ್ಕೂಟದ ಸಹಯೋಗದಲ್ಲಿ ರಸ್ತೆ ಬದಿಯಲ್ಲಿ ಅನಾವಶ್ಯಕವಾಗಿ ಬೆಳೆದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಾಗೂ ವಿದ್ಯುತ್ ತಂತಿಗೆ ತಗಲುವ ಸಾಧ್ಯತೆ ಇರುವ ಮರದ ಟೊಂಗೆಗಳು, ಪೊದೆಗಳು, ಅನಗತ್ಯ ಗಿಡಗಳನ್ನು ತೆರವುಗೊಳಿಸುವ ಸೇವಾಕಾರ್ಯ ನಡೆಸಲಾಯಿತು.
ನಾಗನಡ್ಕದಿಂದ ಶಿಶಿಲೇಶ್ವರ ದೇವಸ್ಥಾನದವರೆಗಿನ ಸುಮಾರು ಅರ್ಧ ಕಿಲೋಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆ ಕಾರ್ಯ ನಡೆಸಲಾಯಿತು.
ವಿಪತ್ತು ನಿರ್ವಹಣೆ ಸ್ವಯಂಸೇವಕರಾದ ಶ್ರೀ ಜಗದೀಶ್ ಶಿಶಿಲ, ಶ್ರೀ ಶೀನಪ್ಪ ಶಿಶಿಲ, ಸ್ವಚ್ಚತಾ ಸೇನಾನಿ ಸುಮಿತ್ರಾ, ಒಕ್ಕೂಟದ ಅಧ್ಯಕ್ಷರಾದ ಶ್ರೀ ವೆಂಕಪ್ಪ ನಾಯಕ, ಮಾಜಿ ಅಧ್ಯಕ್ಷರಾದ ಶ್ರೀ ಮಾಧವ, ಪ್ರಗತಿ ಬಂಧು ಸದಸ್ಯರಾದ ಶ್ರೀ ನವೀನ, ಶ್ರೀ ಸುರೇಶ್ ಉಪಸ್ಥಿತರಿದ್ದರು.
ವಿಪತ್ತು ನಿರ್ವಹಣೆ ಸಂಯೋಜಕಿ ಶ್ರೀಮತಿ ಗಿರಿಜಾ ಎಸ್ ಶ್ರಮದಾನವನ್ನು ಸಂಯೋಜಿಸಿದರು.
*****
Comments
Post a Comment