ಗುರುವಾಯನಕೆರೆ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ ಮತ್ತು ಗಿಡ ನಾಟಿ ಕಾರ್ಯಕ್ರಮ..



ಗುರುವಾಯನಕೆರೆ, ಜುಲೈ 27: 
ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಪಡೆ ವತಿಯಿಂದ ಇವತ್ತು ವಿಶ್ವಕರ್ಮ ಸಭಾಭವನ ಬಸವನಗುಡಿಯಲ್ಲಿ ಗುರುವಾಯನಕೆರೆ ಘಟಕದ 52 ಮಂದಿ  ವಿಪ್ಪತ್ತು ನಿರ್ವಹಣಾ ಸ್ವಯಂಸೇವಕರ ಮಾಸಿಕ ಸಭೆ ನಡೆಸಲಾಯಿತು.

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಾದ ಡಾ.ಎಲ್.ಎಚ್. ಮಂಜುನಾಥ್ ಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅತ್ಯಂತ ಉಪಯುಕ್ತ ವಿಚಾರಧಾರೆಗಳನ್ನು ಸ್ವಯಂಸೇವಕರಿಗೆ ನೀಡಿ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಮುಂದಕ್ಕೆ ಗುರಿ ನಿಗದಿಪಡಿಸುವ ಬಗ್ಗೆ ತಿಳಿಸುತ್ತಾ  ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್ ರೋಟರಿ ಅಧ್ಯಕ್ಷರಾದ ಜಯಂತ್ ಶೆಟ್ಟಿ ರೋಟರಿ ಎಜಿ ಅವರಾದ ಮೋಣಪ್ಪ ಪೂಜಾರಿ, .ಪುಂಜಾಲಕಟ್ಟೆ ಠಾಣಾಧಿಕಾರಿಗಳಾದ ಶ್ರೀಮತಿ ಸೌಮ್ಯ , ಪಂಚಾಯಿತಿ ಅಧ್ಯಕ್ಷರಾದ ಗೋಪಾಲಕೃಷ್ಣ, ನಿರ್ದೇಶಕರಾದ ಸತೀಶ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಸಸಿ ವಿತರಿಸಿ ನೆಡುವ ಮತ್ತು ಪೋಷಿಸುವ ಜವಾಬ್ದಾರಿಯನ್ನು ಸ್ವಯಂಸೇವಕರಿಗೆ ನೀಡಲಾಯಿತು. ಪುಂಜಾಲಕಟ್ಟೆ ಮಂಜಲ್ ಪಾಲಿಕೆಯ ರುದ್ರಭೂಮಿಯಲ್ಲಿ ವಿವಿಧ ಹಣ್ಣು ಹಂಪಲುಗಳ 100 ಗಿಡಗಳನ್ನು ನೆಡುವ ಬಗ್ಗೆ ತೀರ್ಮಾನಿಸಿ ಕಾರ್ಯಕ್ರಮದ ಬಳಿಕ ಈ ಗಿಡಗಳನ್ನು ನೆಡಲಾಯಿತು .
ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಲಸಿನ ಗಿಡವನ್ನು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ  ಸ್ವಯಂಸೇವಕರಿಗೆ ಮಾಸ್ಕ್ ವಿತರಿಸಲಾಯಿತು. ಜಲಾನಯನ ಕಾರ್ಯಕ್ರಮದ ಅಂಗವಾಗಿ ಯೋಜನೆ ಫಲಾನುಭವಿಗೆ ಸಾಂಕೇತಿಕವಾಗಿ ರಜನಿ ಎಂಬವರಿಗೆ ಫಿಲ್ಟರ್ ವಿತರಿಸಲಾಯಿತು. 

ಮಾಲಾಡಿ ಗ್ರಾಮದ ಬಡ ಕುಟುಂಬದ ಶ್ರೀ ಅಲೆಕ್ಸ್ ಸೆರಾ ಇವರ ಮನೆ ರಿಪೇರಿ ಮಾಡುವ ಬಗ್ಗೆ ರೋಟರಿ ಕ್ಲಬ್ ಯವರು ಜವಾಬ್ದಾರಿ ವಹಿಸಿ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು. 

ಗಿಡ ನೆಡಲು ಎಲ್ಲ ಸಸಿಗಳನ್ನು ನಡ ವಲಯ ಅರಣ್ಯ ಇಲಾಖೆಯಿಂದ ಉಚಿತವಾಗಿ ನೀಡಿದ್ದರು. ಕಾರ್ಯಕ್ರಮವನ್ನು ಶ್ರೀ ವಿಶ್ವಕರ್ಮ ಸಮುದಾಯ ಭವನ. ರುದ್ರಭೂಮಿ ವ್ಯವಸ್ಥಾಪನಾ ಸಮಿತಿ ಮಂಜಲ್ ಪಾಲಿಕೆ, ರೋಟರಿ ಕ್ಲಬ್ ಮಡಂತ್ಯಾರು, ಗ್ರಾಮ  ಪಂಚಾಯತ್ ಮಡಂತ್ಯಾರು ಇವರ ಆಶ್ರಯದಲ್ಲಿ ನಡೆಸಲಾಯಿತು.
ಸ್ವಯಂಸೇವಕರಿಗೆ ಮಾಹಿತಿ ಕಾರ್ಯಕ್ರಮದಲ್ಲಿ ಸ್ಪೂರ್ತಿದಾಯಕ ಮಾಹಿತಿಯನ್ನು ಜನಜಾಗೃತಿ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರು ನೀಡಿದರು.

ಒಕ್ಕೂಟದ ಅಧ್ಯಕ್ಷೆ ರೇಖಾ, ಜನಜಾಗೃತಿ ಸದಸ್ಯರಾದ  ಪದ್ಮನಾಭ ಸಾಲಿಯಾನ್,  ಮೇಲ್ವಿಚಾರಕ ಆದಿತ್ಯ, ಸೇವಾ ಪ್ರತಿನಿಧಿ ಶಾಲಿನಿ ಮತ್ತು ಹರಿಣಾಕ್ಷಿ , ಜ್ಞಾನ ವಿಕಾಸ ಸಮನ್ವಯಾಧಿಕಾರಿ  ಹರಿಣಾಕ್ಷಿ ಸಹಕರಿಸಿದ್ದರು.

ಶ್ರೀ ಜೈವಂತ ಪಟಗಾರ ಯೋಜನಾಧಿಕಾರಿ ವಿಪತ್ತು ನಿರ್ವಹಣೆ ವಿಭಾಗ ಕಾರ್ಯಕ್ರಮ ಸಂಯೋಜನೆ ಮಾಡಿದರು. ಕಾರ್ಯಕ್ರಮದ ಬಳಿಕ ಸ್ವಯಂಸೇವಕರಿಗೆ ವೈಯಕ್ತಿಕ ಕೆಲಸ ಕಾರ್ಯಗಳ ಜವಾಬ್ದಾರಿ, ಪರಿಶೀಲನೆ, ದಾಖಲಾತಿಗಳ ಬಗ್ಗೆ ಮಾಹಿತಿ ಮಾಸಿಕ ವರದಿ ಬಗ್ಗೆ ಮಾಹಿತಿ, ಚರ್ಚೆ ಸಮಯ ಹಮ್ಮಿಕೊಳ್ಳಲಾಗಿತ್ತು. 

Comments