ಮಡಂತ್ಯಾರು ವಿಪತ್ತು ನಿರ್ವಹಣೆಯ ಘಟಕದಿಂದ ಗ್ರಾಮ ಪಂಚಾಯತಿ ಭೇಟಿ..


ಗುರುವಾಯನಕೆರೆ, ಜುಲೈ 27: ಮಡಂತ್ಯಾರು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಇಂದು ಮಾಲಾಡಿ ಗ್ರಾಮ ಪಂಚಾಯತಿ ಭೇಟಿ ನೀಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ  ಬಗ್ಗೆ  ಮಾಹಿತಿ ನೀಡಿದರು.

ಸ್ವಯಂಸೇವಕರಾದ ಶ್ರೀ ಭರತ್ ಕುಮಾರ್, ಶ್ರೀ ಬಾಲಕೃಷ್ಣ ಹಾರಬೆ, ಶ್ರೀ ಸೇಸಪ್ಪ ಕುಕ್ಕಳ, ಶ್ರೀ ಲಕ್ಷಣ ಉರ್ಲಾ, ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಭೇಟಿ ನೀಡಿದ ತಂಡದಲ್ಲಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶ್ರೀ ರಾಘವೇಂದ್ರ ಅವರು ಸ್ವಯಂಸೇವಕರನ್ನು ಪರಿಚಯಿಸಿಕೊಂಡು ಗ್ರಾಮ ಪಂಚಾಯತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ, ಮೇಲ್ವಿಚಾರಕರಾದ ಶ್ರೀ ಆದಿತ್ಯ, ವಿಪತ್ತು ನಿರ್ವಹಣಾ ಸಂಯೋಜಕರಾದ ಶ್ರೀ ಸತೀಶ್ ಆಚಾರ್ಯ ಉಪಸ್ಥಿತರಿದ್ದರು.

                          ******

Comments