ಗುರುವಾಯನಕೆರೆ ಘಟಕದಿಂದ ವಿಪತ್ತು ನಿರ್ವಹಣೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಮಾಹಿತಿ..
ಗುರುವಾಯನಕೆರೆ, ಜುಲೈ 25: ವಿಪತ್ತು ನಿರ್ವಹಣೆಯ ಕುರಿತು ಸಮುದಾಯಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ನೀಡುವ ಸಭೆಯನ್ನು ಗುರುವಾಯನಕೆರೆ ವಿಪತ್ತು ನಿರ್ವಹಣಾ ಘಟಕದಿಂದ ನಡೆಸಲಾಯಿತು.
ವಿಪತ್ತು ನಿರ್ವಹಣೆ ಸಂಯೋಜಕಿ ಶ್ರೀಮತಿ ಸವಿತಾ ಪಿರೇರ ಅವರು ವಿಪತ್ತು ನಿರ್ವಹಣೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಕೊರೋನ ವಿಪತ್ತು ಇರುವ ಇಂದಿನ ದಿನಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆಯ ಅಗತ್ಯತೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.
ವಿಪತ್ತು ನಿರ್ವಹಣಾ ಸ್ವಯಂಸೇವಕರು ಸಾಮಾಜಿಕ ಸೇವಾಕಾರ್ಯ ಮಾಡುತ್ತಿರುವ ಸಂದರ್ಭಗಳಲ್ಲಿ ಸಾರ್ವಜನಿಕರು ತಂಡದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡರು.
Comments
Post a Comment