ಅಗ್ನಿಶಾಮಕ ದಳದ ಠಾಣೆ ಭೇಟಿ..
ಬೆಳ್ತಂಗಡಿ, ಜುಲೈ 29: ಬೆಳ್ತಂಗಡಿ ತಾಲೂಕಿನ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ ಆಯೋಜನೆ ಪ್ರಯುಕ್ತ, ಕಾರ್ಯಕ್ರಮಕ್ಕೆ ಸಹಕಾರ ಕೋರಿ ಮನವಿ ಮಾಡಿಕೊಳ್ಳಲು ಬೆಳ್ತಂಗಡಿ ಹಾಗೂ ಗುರುವಾಯನಕೆರೆ ವ್ಯಾಪ್ತಿಗೆ ಸಂಬಂಧಿಸಿದ ಅಗ್ನಿಶಾಮಕ ದಳದ
ಠಾಣಾಧಿಕಾರಿಯವರಾದ ಶ್ರೀಯುತ ಕ್ಲೇವಿಯಸ್ ಡಿಸೋಜ ಅವರಲ್ಲಿ ಜನಜಾಗೃತಿ ನಿರ್ದೇಶನಾಲಯದ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸೆಂಟ್ ಪಯಸ್ ಅವರು ವಿಪತ್ತು ನಿರ್ವಹಣಾ ಕಾರ್ಯಕ್ರಮದ ಕುರಿತು ಚರ್ಚಿಸಿದರು.
ಯೋಜನೆಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಮೂಲಕ ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿರುವ ಸೇವಾಕಾರ್ಯ ಹಾಗೂ ವಿಪತ್ತು ನಿರ್ವಹಣಾ ಕಾರ್ಯದ ಬಗ್ಗೆ ವಿವರಿಸಿದರು.
ಬೆಳ್ತಂಗಡಿ ವಿಪತ್ತು ನಿರ್ವಹಣೆ ಘಟಕದ ಮಾಸಿಕ ಸಭೆಯ ಪ್ರಯುಕ್ತ ಆಯೋಜಿಸಿದ ಸ್ವಚ್ಚತಾ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.
ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಯವರಾದ ಶ್ರೀ ಜಯಕರ ಶೆಟ್ಟಿ, ಜನಜಾಗೃತಿ ಕಾರ್ಯಕ್ರಮದ ಯೋಜನಾಧಿಕಾರಿಯವರಾದ ಶ್ರೀ ಚನ್ನಪ್ಪ ಗೌಡ, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ ಹಾಗೂ ಜನಜಾಗೃತಿ ಕಾರ್ಯಕ್ರಮದ ಸಿಬ್ಬಂದಿ ಶ್ರೀ ನವೀನ್ ಉಪಸ್ಥಿತರಿದ್ದರು.
Comments
Post a Comment