ಹೊಸಂಗಡಿ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳೀಯರಿಂದ ಆಹಾರ ಧಾನ್ಯ ಕಿಟ್ ವಿತರಣೆ..



ಗುರುವಾಯನಕೆರೆ: ಹೊಸಂಗಡಿ ವಲಯದ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರು ಹಾಗೂ ಸ್ಥಳೀಯರು ಕರೋನ ಸೊಂಕಿತರು ಹಾಗೂ ಅವರ ಅಕ್ಕ ಪಕ್ಕದ 4 ಮನೆಗಳು ಸೀಲ್ ಡೌನ್ ಆದ ಸಂದರ್ಭದಲ್ಲಿ ಆ ಕುಟುಂಬಗಳಿಗೆ ಅಗತ್ಯವಿರುವ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.

 ಹೊಸಂಗಡಿ ವ್ಯಾಪ್ತಿಯಲ್ಲಿ ಇರುವ ಕರಿಮನೇಳು ಗ್ರಾಮದಲ್ಲಿ ಕರೋನ ಸೊಂಕಿತರು ಹಾಗೂ ಅವರ ಅಕ್ಕ ಪಕ್ಕದ ಮನೆಯವರು ಸೀಲ್ ಡೌನ್ ಆದ ಕಾರಣದಿಂದ ಎಲ್ಲಿಗೂ ತೆರಳುವಂತಿರಲಿಲ್ಲ. ಆ ಪ್ರದೇಶ ಸೀಲ್ ಡೌನ್ ಆಗಿದ್ದರಿಂದ ಅಲ್ಲಿಗೆ ಯಾರೂ ಬರುತ್ತಿರಲಿಲ್ಲ. 

ಆ ಕುಟುಂಬಗಳು ಸಮಸ್ಯೆಗೆ ಸಿಲುಕಬಾರದು ಎನ್ನುವ ಉದ್ದೇಶದಿಂದ ವಿಪತ್ತು ನಿರ್ವಹಣಾ ಸ್ವಯಂಸೇವಕರು ಆರೋಗ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆಯಿಂದ ವಿಶೇಷ ಅನುಮತಿ ಪಡೆದು ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮಾದರಿ ಕಾರ್ಯ ಮಾಡಿದ್ದಾರೆ. 

ಕಿಟ್ ಖರೀದಿಸಲು ಸ್ಥಳೀಯ ದಾನಿಗಳು ಸಹಾಯ ಮಾಡಿರುತ್ತಾರೆ.  ವಿಪತ್ತು ನಿರ್ವಹಣಾ ತಂಡದ  ಸ್ವಯಂಸೇವಕರಾದ ಶ್ರೀ ಅರುಣ್ ಹೆಗ್ಡೆ,  ಸ್ಥಳೀಯರಾದ ಶ್ರೀ ರಾಮ್ ದಾಸ್ ನಾಯಕ್ ಹಾಗೂ ಯಶವಂತ್ ಇವರು  ಕಿಟ್ ವಿತರಣೆ ಮಾಡಿ ಮಾದರಿ ಕಾರ್ಯ ನಿರ್ವಹಿಸಿರುವ ಸಹೃದಯರು.

                   *********

Comments