ನಡ ಗ್ರಾಮದ ವಿಪತ್ತು ನಿರ್ವಹಣಾ ಸ್ವಯಂಸೇವಕ ಮಂಜುನಾಥ್ ಅವರಿಂದ ಉರಗ ಕಾರ್ಯಾಚರಣೆ...

ಬೆಳ್ತಂಗಡಿ, ಜುಲೈ 30:  ನಿನ್ನೆಯ ರಾತ್ರಿ ಸುಮಾರು 9 ಗಂಟೆಗೆ ನಡ ಗ್ರಾಮದ ವಿಪತ್ತು ನಿರ್ವಹಣೆ ಸ್ವಯಂಸೇವಕರಾದ ಮಂಜುನಾಥ್ ಅವರಿಗೆ ಕರೆಯೊಂದು ಬಂತು.

ನಡ ಗ್ರಾಮದ ದೇಲೆ೯ಕ್ಕಿ ಮನೆಯ ಗಣೇಶ್ ಮೂಲ್ಯ ಅವರು ಕರೆ ಮಾಡಿದವರು.

 ನಮ್ಮ ಮನೆಯ ಅಂಗಳದಲ್ಲಿ  ಹೆಬ್ಬಾವು ವೊಂದು ಹರಿದಾಡುತ್ತಿದೆ, ಮನೆಮಂದಿಯೆಲ್ಲಾ ಹೆದರಿಕೊಂಡಿದ್ದಾರೆ. ರಾತ್ರಿ ಒಂಭತ್ತು ಗಂಟೆ ಬೇರೆ ಆಗಿದೆ. ಸಹಾಯ ಮಾಡುತ್ತೀರಾ? ವಿನಂತಿಸಿಕೊಂಡಿದ್ದಾರೆ.

 ಹಾವಿನ ಭೀತಿಯಲ್ಲಿರುವ ಅವರ ಮನವಿಗೆ ಸ್ಪಂದಿಸಿದ ಮಂಜುನಾಥ್ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.

 ಕತ್ತಲೆಯಲ್ಲಿ ಹಾವು ಹಿಡಿಯುವುದು ಸವಾಲೆನ್ನಿಸಿದರೂ, ನೆವ ಹೇಳದೇ ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿದು ಕಾಡಿಗೆ ಕೊಂಡೊಯ್ದು ಬಿಟ್ಟು ಬಂದಿದ್ದಾರೆ. 

ಹಾವಿನ ಭೀತಿಯಲ್ಲಿದ್ದ ಸುತ್ತಮುತ್ತಲಿನ ಕುಟುಂಬಗಳು ಮಂಜುನಾಥ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಅಭಿನಂದಿಸಿದ್ದಾರೆ.

Comments