ಬೆಳ್ತಂಗಡಿ, ಅಗಸ್ಟ್ 30: ನಡ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಗಿಡನಾಟಿ ಕಾರ್ಯಕ್ರಮ.
ಬೆಳ್ತಂಗಡಿ, ಅಗಸ್ಟ್ 30: ಶ್ರೀ ಧರ್ಮಸ್ಥಳ ಸೇವಾ ನಡ /ಕನ್ಯಾಡಿ ವಿಪತ್ತು ನಿವ೯ಹಣೆ ಘಟಕ ಹಾಗೂ ಗ್ರಾಮ ಸ್ವಚ್ಛತಾ ಸೇನಾನಿ ಇವರಿಂದ ಇಂದು ಗಿಡನಾಟಿ ಹಾಗೂ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.
ಕನ್ಯಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಮೂವತ್ತಕ್ಕೂ ಅಧಿಕ ಗಿಡ ನಾಟಿ ಮಾಡಲಾಯಿತು. ಹಾಗೂ ಶಾಲಾ ಮೈದಾನದ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಅಜಿತ್ ಆರಿಗರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಜನಜಾಗೃತಿ ತಾಲೂಕು ಸಮಿತಿ ಸದಸ್ಯರಾದ ಶ್ರೀ ತನಿಯಪ್ಪ ಗೌಡ ಅವರು ಶಾಲೆಯ ಮುಖ್ಯ ಶಿಕ್ಷಕರಿಗೆ ಗಿಡ ವಿತರಿಸುವ ಮೂಲಕ ಗಿಡನಾಟಿ ಗೆ ಚಾಲನೆ ನೀಡಿದರು.
ಕಾಯ೯ಕ್ರಮದಲ್ಲಿ ಕನ್ಯಾಡಿ ವಿಭಾಗದ ಸ್ವಚ್ಛತಾ ಸೇನಾನಿ ಪವನ್ ಶೆಟ್ಟಿ, ಅಜಿತ್ ಆರಿಗ, ತಾಲೂಕು ಸಮಿತಿ ಸದಸ್ಯರಾದ ತನಿಯಪ್ಪ ಗೌಡ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನೊಣಯ್ಯ ಗೌಡ, ಕನ್ಯಾಡಿ ಒಕ್ಕೂಟದ ಅಧ್ಯಕ್ಷ ಮೋನಪ್ಪ ಗೌಡ, ಶಾಲಾ ಮುಖ್ಯ ಶಿಕ್ಷಕರಾದ ರಮೇಶ್ ಪೈಲಾರು , ಅಧ್ಯಾಪಕರಾದ ವಿಕಾಸ್ ಕುಮಾರ್, ಹನುಮಂತ ರಾಯ, ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿವ೯ಹಣೆ ಘಟಕದ ಸಂಯೋಜಕಿ ವಸಂತಿ,ಕನ್ಯಾಡಿ ವಿಭಾಗದ ಸೇವಾಪ್ರತಿನಿಧಿ ಶ್ರೀಮತಿ ಪುಷ್ಪ, ಶಕುಂತಲಾ, ವಿಪತ್ತು ನಿವ೯ಹಣೆ ತಂಡದ ಸ್ವಯಂಸೇವಕರಾದ
ಮಂಜುನಾಥ್, ಕಾತಿ೯ಕ್, ಉಮೇಶ್, ಜಯರಾಮ, ಶಿವಪ್ಪ, ಸಂದೇಶ್, ಸುರೇಶ್, ಹಷ೯ದ್, ಅನಿಲ್ ಡೇಸಾ,ಜೀವನ್ ಡಿಸೋಜ, ವಿಖ್ಯಾತ್, ಒಲಿವಿನ್ ಡಿಸೋಜ, ಪುಷ್ಪಲತಾ, ಮೋಹನ್, ಕನ್ಯಾಡಿ ಒಕ್ಕೂಟದ ಸದಸ್ಯರಾದ ಆನಂದ ಗೌಡ, ಬೇಬಿ, ಹರೀಶ್ ಗೌಡ, ಸುಲೋಚನ, ಗಿರಿಜ , ಮೀನಾಕ್ಷಿ, ಪುಷ್ಪ, ಪದ್ಮವತಿ, ಜಯಂತಿ, ಜಯಂತಿ ಕೆ ಇವರೆಲ್ಲರೂ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ವರದಿ: ವಸಂತಿ
Comments
Post a Comment