ಹೊನ್ನಾವರ: ಮನೆ ಕುಸಿದು ಹಾನಿ, ವಿಪತ್ತು ನಿರ್ವಹಣೆ ಸ್ವಯಂ ಸೇವಕರಿಂದ ಮನೆ ಭೇಟಿ..

ಹೊನ್ನಾವರ, ಅಗಸ್ಟ್ 23: ತಾಲ್ಲೂಕಿನ ಖರ್ವಾ  ಗ್ರಾಮದ  ಕೋರೆಯಲ್ಲಿ ಮನೆಯ ಹತ್ತಿರದ ಧರೆಯೊಂದು ಕುಸಿದು ಕುಟುಂಬ ವೊಂದು ಸಮಸ್ಯೆಯ ಸುಳಿಗೆ ಸಿಲುಕಿದೆ.

 ನಿರಂತರ ಮಳೆ ಸುರಿದ ಪರಿಣಾಮವಾಗಿ  ನಿಧಾನವಾಗಿ ಗುಡ್ಡದ ಮಣ್ಣು ಜಾರಲು ತೊಡಗಿದ್ದು ಸಮೀಪದ ಮಂಜುನಾಥ್ ಅವರ ಕುಟುಂಬ ಭೀತಿಯಿಂದ ಮನೆ ಖಾಲಿ ಮಾಡಿ ಹತ್ತಿರದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
 ಸಂಕಷ್ಟದಲ್ಲಿರುವ ಈ ಕುಟುಂಬವನ್ನು ಸ್ವಯಂ ಸೇವಕರಾದ ಶ್ರೀ ಮಾದೇವ ಮತ್ತು ಸಂಯೋಜಕಿಯಾದ ಪೂರ್ಣಿಮಾ ಅವರು ಭೇಟಿ ನೀಡಿದರು.

ಮಂಜುನಾಥ್ ಅವರ ಮನೆ ಕುಸಿಯತೊಡಗಿ ನಾಲ್ಕು ದಿವಸ ಆಗಿದ್ದು ವಿಷಯ ಗಮನಕ್ಕೆ ಬಂದ ಕೂಡಲೇ ವಿಪತ್ತು ನಿರ್ವಹಣೆ ಸಂಯೋಜಕಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿರುತ್ತಾರೆ. 

Comments