ಬೆಳ್ತಂಗಡಿ: ಶಾಲಾ ಮೈದಾನ ಸ್ವಚ್ಛತೆ ನಡೆಸಿದ ವಿಪತ್ತು ನಿರ್ವಹಣೆ ಸ್ವಯಂಸೇವಕರು.

ಬೆಳ್ತಂಗಡಿ, ಅಗಸ್ಟ್ 30: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ ಧರ್ಮಸ್ಥಳ,
ವಿ.ಹಿಂ.ಪ. ಬಜರಂಗದಳ ಕಲ್ಮಂಜ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಗ್ರಾ. ಪಂ. ಕಲ್ಮಂಜ ಹಾಗೂ ಊರವರ ಸಹಕಾರದಿಂದ ಕಲ್ಮಂಜ ಗ್ರಾಮದ ಸ.ಹಿಪ್ರಾ.ಶಾಲೆ ಸಿದ್ದಬೈಲು ಪರಾರಿ ಇಲ್ಲಿನ ಶಾಲಾ ಆವರಣದ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

 ಈ ತಂಡವು  ಸತತ ಮೂರನೇಯ ರವಿವಾರ ನಡೆಸುತ್ತಿರುವ ಕೆಲಸ ಇದಾಗಿದ್ದು ತಮ್ಮ ಬಿಡುವಿನ ವೇಳೆಯಲ್ಲಿ ಈ ಯುವಕರ ತಂಡ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಕೊಂಡು ಸಾಮಾಜಿಕ ಕಳಕಳಿಯನ್ನು ಮೆರೆದಿದೆ.  

ಶ್ರಮದಾನದಲ್ಲಿ ಅನಿಲ್,  ಉಮೇಶ್,  ಸಂದೀಪ್.S, ಧನಂಜಯ, ಸಾಂತಪ್ಪ, ಜಯಾನಂದ, ಬಾಲಕೃಷ್ಣ,ಗಿರಿಧರ, ಕುಶಾಲಪ್ಪ ಗೌಡ ಬನದ ಬ್ಯೆಲು. ಮತ್ತು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕ ಮಧುರಾಜ್ ಭಾಗವಹಿಸಿದ್ದರು.

ವರದಿ: ಮಧುರಾಜ್

Comments