ಗುರುವಾಯನಕೆರೆ: ಹದಗೆಟ್ಟಿರುವ ರಸ್ತೆಗೆ ಕಾಯಕಲ್ಪ ನೀಡಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು


ಗುರುವಾಯನಕೆರೆ, ಅಗಸ್ಟ್ 23: ಶ್ರೀ ಧರ್ಮಸ್ಥಳ ಸೇವಾ ಮಡಂತ್ಯಾರು ಘಟಕದ ಸ್ವಯಂಸೇವಕರು ಇಂದು ಮಾಲಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತುಂಬೆ ಎಂಬಲ್ಲಿ ರಸ್ತೆ ರಿಪೇರಿ ಶ್ರಮದಾನವನ್ನು ನಡೆಸಿದರು. ಸ್ಥಳೀಯರ ಸಹಕಾರದಿಂದ ನಡೆಸಿದ ಶ್ರಮದಾನದಲ್ಲಿ ರಸ್ತೆ ರಿಪೇರಿ ಕಾರ್ಯ  ನಡೆಸಲಾಗಿದೆ.

ಧಾರಾಕಾರವಾಗಿ ಸುರಿದ ಮಳೆಯ ಕಾರಣದಿಂದಾಗಿ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಹದಗೆಟ್ಟಿತ್ತು. ವಾಹನ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ತೊಂದರೆ ಉಂಟಾಗಿತ್ತು. 

ನಿತ್ಯ ನೂರಾರು ಮಂದಿ ಓಡಾಡುವ ಸ್ಥಳವಾಗಿದ್ದರಿಂದ ರಸ್ತೆಯನ್ನು ಸರಿಪಡಿಸುವ ನಿರ್ಣಯ ಕೈಗೊಂಡ ವಿಪತ್ತು ನಿರ್ವಹಣೆ ಸ್ವಯಂಸೇವಕರಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಅವರು ಸ್ಥಳೀಯರೊಂದಿಗೆ ಕೂಡಿಕೊಂಡು ಶ್ರಮದಾನದ ಮೂಲಕ ರಸ್ತೆಯಲ್ಲಿ ಜಲ್ಲಿ, ಮರಳು, ಕಲ್ಲುಗಳನ್ನು ಬಳಸಿ ರಿಪೇರಿ ಕಾರ್ಯ ನಡೆಸಿರುತ್ತಾರೆ.

ಸ್ಥಳೀಯರಾದ  ಅಶೋಕ್ ಕುಮಾರ್, ರಂಜಿತ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ನವೀನ್ ಮೋರಾಸ್, ಸಚಿನ್, ಕೀರ್ತಿ, ರಿತೇಶ್, ರಿಷನ್ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

Comments