ಬೆಳ್ತಂಗಡಿ: ವಿಪತ್ತು ನಿರ್ವಹಣೆ ಸ್ವಯಂಸೇವಕರಿಂದ ಉರಗ ಕಾರ್ಯಾಚರಣೆ
ಬೆಳ್ತಂಗಡಿ, ಅಗಸ್ಟ್ 25: ಬೆಳಾಲು ಗ್ರಾಮದ ದಾಮೋದರ ಎನ್ನುವವರ ಮನೆಯಲ್ಲಿ ನಾಗರ ಹಾವೊಂದು ಕಂಡುಬಂತು.
ಅಪಾಯಕಾರಿಯಂತೆ ಕಂಡುಬರುತ್ತಿರುವ ಹಾವು ಕಣ್ಣಿಗೆ ಗೋಚರವಾದಾಗ ರಾತ್ರಿಯಾಗಿತ್ತು. ಅತ್ತಿತ್ತ ಸರಿದಾಡುತ್ತಾ ಭಯ ಹುಟ್ಟಿಸಿದ ಹಾವನ್ನು ಕಂಡಕೂಲೇ ದಾಮೋದರ್ ಅವರು ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಶ್ರೀ ಹರೀಶ್ ಅವರಿಗೆ ಕರೆ ಮಾಡಿದ್ದಾರೆ.
ತಕ್ಷಣ ಸ್ಪಂದಿಸಿದ ಹರೀಶ್ ಅವರು ವಿಪತ್ತು ನಿರ್ವಹಣೆ ಸ್ವಯಂಸೇವಕರಾದ ಜಗದೀಶ್ ಅವರೊಂದಿಗೆ ಸ್ಥಳಕ್ಕೆ ಭಾವಿಸಿದ್ದಾರೆ.
ರಾತ್ರೋರಾತ್ರಿ ಒಂದು ಗಂಟೆಗೂ ಅಧಿಕ ಸಮಯ ಕಾರ್ಯಾಚರಣೆ ನಡೆಸಿದ ಈರ್ವರು ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ.
ಹರೀಶ್ ಅವರ ಸೇವಾಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ಸುತ್ತಮುತ್ತಲಿನ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.
Comments
Post a Comment