ಗುರುವಾಯನಕೆರೆ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಕುಟುಂಬಕ್ಕೆ ನೆರವಾದ ವಿಪತ್ತು ನಿರ್ವಹಣೆ ಸ್ವಯಂಸೇವಕಿ..
ಗುರುವಾಯನಕೆರೆ, ಅಗಸ್ಟ್ 28:'ಉರುವಾಲು ಗ್ರಾಮದ ರಫೀಕ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಮಕ್ಕಳು ಇನ್ನೂ ಸಣ್ಣವರು. ಅವರ ಕುಟುಂಬ ಬಹಳ ಕಷ್ಟದಲ್ಲಿದಲ್ಲಿದೆ'. ಹೀಗೆ ರಫೀಕ್ ಅವರ ಕುರಿತು, ಅವರ ಕುಟುಂಬದ ಸಂಕಷ್ಟದ ಕುರಿತು ಕನಿಕರದ ಮಾತುಗಳು ಊರಲ್ಲಿ ಆಗಾಗ್ಗೆ ಕೇಳಿಬರುತ್ತಿತ್ತು.
ಮೇಲಿಂದ ಮೇಲೆ ರಫೀಕ್ ಅವರ ಕುಟುಂಬದ ಕುರಿತು ಸುದ್ದಿಗಳು ಕಿವಿಗೆ ಬೀಳುತ್ತಿದ್ದಂತೆಯೇ 'ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕ'ದ ಸ್ವಯಂಸೇವಕಿ ಶ್ರೀಮತಿ ಶೋಭಾ ಅವರು ರಫೀಕ್ ಅವರ ಕುಟುಂಬವನ್ನು ಭೇಟಿ ಮಾಡಿ ಬರೋಣ ಎಂದು ನಿರ್ಧರಿಸಿ ಅವರ ಮನೆಗೆ ತೆರಳಿದ್ದರು.
ಹೌದು.. ಅವರ ಮನೆಯಲ್ಲಿ ನಿಜವಾಗಿಯೂ ಸಮಸ್ಯೆ ಇತ್ತು. ರಫೀಕ್ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರು. ಸಣ್ಣ ಸಣ್ಣ ಮಕ್ಕಳು ಅಪ್ಪನ ಕಾಯಿಲೆಯಿಂದ ಗಾಬರಿಯಾಗಿದ್ದರು. ಪತ್ನಿ ಹಾಗೂ ಅವರ ತಾಯಿ ತಮ್ಮ ಅಸಾಹಯಕತೆಯನ್ನು ವ್ಯಕ್ತಪಡಿಸುತ್ತಿದ್ದರು.
ಕುಶಲೋಪಚರಿ ವಿಚಾರಿಸಲೆಂದು ತೆರಳಿದ ಸ್ವಯಂಸೇವಕಿ ಶೋಭಾ ಅವರಿಗೂ ಆ ಕುಟುಂಬ ಎದುರಿಸುತ್ತಿರುವ ಸಮಸ್ಯೆ ಮನಸ್ಸನ್ನು ಕದಡಿತ್ತು.
'ಮಂಗಳೂರಿನ ಆಸ್ಪತ್ರೆಗೆ ತೆರಳಬೇಕಿದೆ' ಎಂದು ರಫೀಕ್ ಅವರ ಪತ್ನಿ ಶೋಭಾ ಅವರಲ್ಲಿ ಅಂದಾಗ 'ತಾನೂ ಸಹ ಆಸ್ಪತ್ರೆಗೆ ತೆರಳಲು ಸಹಕರಿಸುತ್ತೇನೆ' ಎಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರಫೀಕ್ ಹಾಗೂ ಅವರ ತಾಯಿ ಬಿಫಾತಿಮಾ ಅವರನ್ನು ಬಿಟ್ಟು ಬಂದಿರುತ್ತಾರೆ.
ರಫೀಕ್ ಅವರ ಕುಟುಂಬಕ್ಕೆ ಸ್ವಲ್ಪಮಟ್ಟಿಗೆ ಅನುಕೂಲವಾಗಲೆಂದು ಅವರ ಮನೆಗೆ ಅಕ್ಕಿಯನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
Comments
Post a Comment