ನವಲಗುಂದ: ಕಂದಕಕ್ಕೆ ಉರುಳಿದ ಆಟೋ ರಿಕ್ಷಾ, ನೆರವಿಗೆ ಧಾವಿಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು.
ನವಲಗುಂದ, ಅಗಸ್ಟ್ 24: ತಾಲೂಕಿನ ಚಿಲಕವಾಡ ಗ್ರಾಮದಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದ ಆಟೋರಿಕ್ಷಾವೊಂದು ಅಕಸ್ಮಾತ್ತಾಗಿ ಕಂದಕಕ್ಕೆ ಉರುಳಿದೆ.
ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಆಟೋದಲ್ವಿಲಿರುವ ನಾಲ್ವರೂ ಸುರಕ್ಷಿತವಾಗಿದ್ದಾರೆ.
ವಿಷಯ ತಿಳಿದ ತಕ್ಷಣ 'ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ'ದ ಸದಸ್ಯ ಮಹೇಶ್ ಅವರು ಸ್ಥಳಕ್ಕೆ ಧಾವಿಸಿ ಆಟೋರಿಕ್ಷಾವನ್ನು ಮೇಲೆತ್ತಲು ಸ್ಥಳೀಯರೊಂದಿಗೆ ಪಾಲ್ಗೊಂಡಿರುತ್ತಾರೆ.
Comments
Post a Comment