ಗುರುವಾಯನಕೆರೆ: ಮುಖ್ಯ ರಸ್ತೆಯಲ್ಲಿ ಬಿದ್ದ ಮರ ತೆರವುಗೊಳಿಸಿದ ವಿಪತ್ತು ನಿರ್ವಹಣೆ ಸ್ವಯಂಸೇವಕರು..
ಬೆಳ್ತಂಗಡಿ, ಅಗಸ್ಟ್ 21: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕ ಅಳದಂಗಡಿ ಸ್ವಯಂಸೇವಕರು ಇಂದು ರಸ್ತೆಯಲ್ಲಿ ಬಿದ್ದಿರುವ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರ ಸರಾಗವಾಗುವಂತೆ ನೋಡಿಕೊಂಡು ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಬೆಳ್ತಂಗಡಿಯಿಂದ ಕಾರ್ಕಳಕ್ಕೆ ತೆರಳುವ ಮುಖ್ಯ ರಸ್ತೆ ಪಿಲ್ಯ ಮಾರಿಗುಡಿಯ ಬಳಿ ಗಾಳಿಯಿಂದಾಗಿ ಮರ ಮುರಿದು ರಸ್ತೆಗೆ ಬಿದ್ದಿತ್ತು.
ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಸ್ವಯಂಸೇವಕರಾದ ಶ್ರೀ ಶುಭಕರ ಪೂಜಾರಿ ಅವರು ಸ್ಥಳೀಯ ಬಾಲಾಜಿ ಹೋಟೆಲ್ ಮಾಲೀಕರಾದ ಶ್ರೀ ಕೃಷ್ಣಪ್ಪ ಪೂಜಾರಿಯವರ ಜೊತೆಯಾಗಿ ಮರವನ್ನು ತೆರವುಗೊಳಿಸಿದರು.
Comments
Post a Comment