ಗುರುವಾಯನಕೆರೆ: ಕಾಂಕ್ರೀಟ್ ಬಳಸಿ ರಸ್ತೆಯ ಗುಂಡಿ ಮುಚ್ಚಿದ ವಿಪತ್ತು ನಿರ್ವಹಣೆ ಸ್ವಯಂಸೇವಕರು.

ಬೆಳ್ತಂಗಡಿ, ಅಗಸ್ಟ್ 21: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕ ಅಳದಂಗಡಿ ಸ್ವಯಂಸೇವಕರು ಇಂದು  ರಸ್ತೆಯಲ್ಲಿನ ಗುಂಡಿಯನ್ನು ಕಾಂಕ್ರೀಟ್ ನಿಂದ ಮುಚ್ಚಿ  ಸಂಭವನೀಯ ಅಪಾಯವನ್ನು ತಪ್ಪಿಸಿದ್ದಾರೆ.

 ಬೆಳ್ತಂಗಡಿಯಿಂದ  ಕಾರ್ಕಳಕ್ಕೆ ತೆರಳುವ  ಮುಖ್ಯ ರಸ್ತೆಯ ಮಾರಿಗುಡಿಯ ತಿರುವಿನ  ಬಳಿ ತೀರಾ ಅಪಾಯಕಾರಿಯಾದ ಗುಂಡಿಯೊಂದು ಬಿದ್ದಿತ್ತು. ತಿರುವು ಹೊಂದಿರುವ ರಸ್ತೆಯಲ್ಲಿ ಗುಂಡಿ ಇದ್ದುದರಿಂದ ವಾಹನ ಸವಾರರಿಗೆ ತೀರಾ ತೊಂದರೆ ಉಂಟಾಗುತ್ತಿತ್ತು.

ಇದನ್ನು ಗಮನಿಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕರಾದ ಶುಭಕರ್ ಪೂಜಾರಿ ಹಾಗೂ ಕೃಷ್ಣಪ್ಪ ಪೂಜಾರಿ ಅವರು  ಸದ್ಧರ್ಮ ಯುವಕ ಮಂಡಲ    ಕುದ್ಯಾಡಿ ಇವರ  ಸಹಕಾರದೊಂದಿಗೆ ರಸ್ತೆಯ ಹೊಂಡಗಳಿಗೆ ಕಾಂಕ್ರೀಟ್ ಹಾಕಿ  ವಾಹನ ಸಂಚಾರ  ಸುಗಮ ಆಗುವಂತೆ  ನೋಡಿಕೊಂಡಿರುತ್ತಾರೆ.

ಕಾಂಕ್ರೀಟ್ ತಯಾರಿಸಲು ಅಗತ್ಯವಿರುವ ಸಿಮೆಂಟ್, ಜಲ್ಲಿ, ಉಸುಕನ್ನು ಸ್ವಯಂಸೇವಕರಾದ ಶುಭಕರ್ ಪೂಜಾರಿ ಅವರು ನೀಡಿರುತ್ತಾರೆ.

ರಸ್ತೆ ರಿಪೇರಿ ಗೊಳಿಸಿದ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳೀಯ ಯುವಕ ಮಂಡಳದ ಸೇವಾಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು.

Comments