ಬೆಳ್ತಂಗಡಿ: ಮಳೆಯಿಂದ ಶಿಥಿಲಗೊಂಡ ಮನೆಗೆ ಕಾಯಕಲ್ಪ ನೀಡುವ ಕುರಿತು ಚರ್ಚಿಸಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರು..

ಕೊಕ್ಕಡದ ಪಟ್ರಮೆ ಗ್ರಾಮದ ಪುಂಡಿಕಾಯಿ ಎಂಬಲ್ಲಿನ ಶಿವರಾಮ ಆಚಾರ್ಯ ಅವರ ಮನೆ ವಿಪರೀತ ಮಳೆ ಹಾಗೂ ಗಾಳಿಯ ಕಾರಣದಿಂದ ಹಾನಿಯಾಗಿತ್ತು. ಮನೆಯ ಹೊದಿಕೆ (ಮಾಡು) ಹಾರಿ ಹೋಗಿ ವಾಸ್ತವ್ಯಕ್ಕೂ ಕಷ್ಟದ ಪರಿಸ್ಥಿತಿ ಉದ್ಭವವಾಗಿತ್ತು. 
ಅಲ್ಲದೇ ಮನೆಯ ಎದುರಿಗಿರುವ ಮರವೊಂದು ಮನೆಯ ಮೇಲೆ ಬಿದ್ದು ಅಪಾಯ ಘಟಿಸುವ ಸಾಧ್ಯತೆಯೂ ಇತ್ತು. ಇದನ್ನು ಗಮನಿಸಿದ 'ಶ್ರೀ ಧರ್ಮಸ್ಥಳ ಸೇವಾ ಕೊಕ್ಕಡ ವಿಪತ್ತು ನಿರ್ವಹಣಾ ಘಟಕ'ದ ಸ್ವಯಂಸೇವಕರು ಮರ ತೆರವು ಗೊಳಿಸಿ ಸಂಭವನೀಯ ಅಪಾಯವನ್ನು ತಪ್ಪಿಸಿದ್ದರು.
ತೀರಾ ಬಡತನದಲ್ಲಿರುವ ಈ ಕುಟುಂಬವನ್ನು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರು ಇಂದು ಭೇಟಿ ನೀಡಿ ಮನೆಗೆ ಕಾಯಕಲ್ಪ ನೀಡುವ ಕುರಿತಾಗಿ ಆ ಕುಟುಂಬದವರಲ್ಲಿ ಚರ್ಚಿಸಿದರು. ಅಲ್ಲದೇ ವಿವಿಧ ಸಂಘಟನೆಯ ಮುಖ್ಯಸ್ಥರಲ್ಲಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಲ್ಲಿ ಚರ್ಚೆ ನಡೆಸಿದರು. 
ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ, ಮೇಲ್ವಿಚಾರಕ ಶ್ರೀ ಸಚಿನ್, ಸೇವಾಪ್ರತಿನಿಧಿ ಶ್ರೀ ಸದಾಶಿವ, ವಿಪತ್ತು ನಿರ್ವಹಣೆ ಸಂಯೋಜಕಿ ಶ್ರೀಮತಿ ಗಿರಿಜಾ ಉಪಸ್ಥಿತರಿದ್ದರು.

Comments