ಬೆಳ್ತಂಗಡಿ: ರಾತ್ರಿ ಹತ್ತು ಗಂಟೆಗೆ ಮನೆಯಲ್ಲಿ ಕಾಣಿಸಿಕೊಂಡ ಹೆಬ್ಬಾವು, ಕಾರ್ಯಾಚರಣೆ ಮಾಡಿದ ವಿಪತ್ತು ನಿರ್ವಹಣೆ ಸ್ವಯಂಸೇವಕ.

ಬೆಳ್ತಂಗಡಿ, ಅಗಸ್ಟ್ 23:   ನಡ ಗ್ರಾಮದ ಕೊಯಗುಡ್ಡೆ  ಎಂಬಲ್ಲಿ ಸೌಮ್ಯ ಎನ್ನುವವರ ಮನೆಯ ಅಂಗಳದಲ್ಲಿ ಹೆಬ್ಬಾವೊಂದು ಕಂಡುಬಂತು.

ಹಿರಿದಾದ ಹಾವು ಕಣ್ಣಿಗೆ ಗೋಚರವಾದಾಗ ಸಮಯ ರಾತ್ರಿ ಹತ್ತು ಗಂಟೆ. ಅತ್ತಿತ್ತ ಸರಿದಾಡುತ್ತಿರುವ ಉದ್ದನೆಯ ಹೆಬ್ಬಾವು  ಸೌಮ್ಯ ಅವರ ಮನೆಯವರನ್ನೆಲ್ಲ ಭಯಕ್ಕೆ ನೂಕಿತ್ತು. 

ಭಯ, ಆತಂಕದ ನಡುವೆ ಆ ಕುಟುಂಬಕ್ಕೆ ನೆನಪಾದವರು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕ ಶ್ರೀ ಮಂಜುನಾಥ್.

 ಆತಂಕದ ಧ್ವನಿಯ ಕರೆ ಬಂದಾಗ ಮಂಜುನಾಥ್ ತಡಮಾಡಲಿಲ್ಲ. ರಾತ್ರೋರಾತ್ರಿ ಸ್ಥಳಕ್ಕೆ ತೆರಳಿದರು. ಹಾವನ್ನು ಹಿಡಿದರು. ಕಾಡಿಗೆ ಬಿಟ್ಟು ಬಂದರು.

  ಮಂಜುನಾಥ್ ಅವರ ಸೇವಾಕಾರ್ಯಕ್ಕೆ ಮೆಚ್ಚುಗೆ  ಸೂಚಿಸಿದ ಸುತ್ತಮುತ್ತಲಿನ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.

Comments