ಬೆಳ್ತಂಗಡಿ: ಮನೆಗೆ ನುಗ್ಗಿ ಆತಂಕ ಸೃಷ್ಟಿಸಿದ ಹಾವು. ಹಿಡಿದು ಕಾಡಿಗೆ ಬಿಟ್ಟ ವಿಪತ್ತು ನಿರ್ವಹಣೆ ಸ್ವಯಂಸೇವಕ.

ಬೆಳ್ತಂಗಡಿ, ಅಗಸ್ಟ್24: ಬೆಳಾಲು ಗ್ರಾಮದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಇಂದು ಕಾಡಿನಿಂದ ನಾಡಿಗೆ ಬಂದಿದ್ದ ಹಾವೊಂದನ್ನು ಹಿಡಿದು ಪುನಃ ಕಾಡಿಗೆ ಬಿಟ್ಟಿದ್ದಾರೆ.

ಬಂದಾರು ಬಲಿಪೆಯ  ಗೋವಿಂದ ಗೌಡ ಅವರ  ಮನೆಯ  ಕೋಳಿಯ ಗೂಡಿಗೆ ನುಗ್ಗಿದ  ನಾಗರ  ಹಾವು ಒಟ್ಟು  18 ದೊಡ್ಡ ಕೋಳಿಗಳನ್ನು  ಮತ್ತು  ಸುಮಾರು ಇಪ್ಪತ್ತಕ್ಕೂ ಅಧಿಕ  ಮರಿಗಳನ್ನು  ಸಾಯಿಸಿತ್ತು.
ಹಾವಿನ ಸಂಚಾರ ಆ ಕುಟುಂಬ ವನ್ನು ಆತಂಕದಿಂದ ಸಮಯ ಕಳೆಯುವಂತೆ ಮಾಡಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಬೆಳಾಲು ಘಟಕದ ಸ್ವಯಂಸೇವಕಾರದ ಶ್ರೀ ಹರೀಶ್  ಅವರು  ಹಾವನ್ನು ಹಿಡಿದು ದಟ್ಟಾರಣ್ಯಕ್ಕೆ  ಬಿಟ್ಟು ಬಂದಿದ್ದಾರೆ.

ಹರೀಶ್ ಅವರ ಕಾರ್ಯಕ್ಕೆ ಸ್ಥಳೀಯರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

Comments