ಬೆಳ್ತಂಗಡಿ: ಶಿಥಿಲಾವಸ್ಥೆಯಲ್ಲಿರುವ ಮನೆ ಭೇಟಿ ಮಾಡಿ ನೆರವಿಗೆ ಧಾವಿಸಲು ಶಾಸಕರ ಗಮನ ಸೆಳೆದ ವಿಪತ್ತು ನಿರ್ವಹಣೆ ಸ್ವಯಂಸೇವಕರು.

ಬೆಳ್ತಂಗಡಿ, ಅಗಸ್ಟ್ 28: ಮಳೆಯಿಂದಾಗಿ ಹಾನಿಗೊಳಗಾದ ಕಲ್ಮಂಜ ಗ್ರಾಮದ ಹುಂಕ್ರೊಟ್ಟು ಎಂಬಲ್ಲಿ ಡಿಕಮ್ಮ ಎಂಬವರ ಮನೆಗೆ ಇಂದು ಭೇಟಿ ನೀಡಿದೆವು.
ಈ ಮನೆಯು ಮಣ್ಣಿನ ಇಟ್ಟಿಗೆಯಿಂದ ಕಟ್ಟಿರುವುದರಿಂದ ಮನೆಯು ವಾಸಕ್ಕೆ  ಯೋಗ್ಯವಲ್ಲದ ಸ್ಥಿತಿಗೆ ತಲುಪಿರುತ್ತದೆ. 

ಸದರಿ ಕುಟುಂಬ ಆರ್ಥಿಕವಾಗಿ ಬಡವರಾಗಿದ್ದರಿಂದ ನೆರವು ನೀಡುವಂತೆ ಶಾಸಕರ ಗಮನಕ್ಕೂ ತರಲಾಗಿದೆ.

ಮನೆಯ ಕೆಲವು ಭಾಗವು ಬೀಳುವ ಸ್ಥಿತಿಯಲ್ಲಿದೆ. ಈ ಸಂಬಂಧ ಇಂದು ವಿಪತ್ತು ನಿರ್ವಹಣಾ ತಂಡದ ಸದಸ್ಯನಾದ ನಾನು(ಸಚಿನ್ ಗೌಡ) ಹಾಗೆಯೇ ತಾಲೂಕು ಪಂಚಾಯತ್ ಸದಸ್ಯ ಹಾಗೂ ಬೆಳ್ತಂಗಡಿ ಸ್ಥಾಯಿ ಸಮಿತಿಯ ಅಧ್ಯಕ್ಷರು ಆಗಿರುವ ಶಶಿಧರ ಕಲ್ಮಂಜ ಹಾಗೂ ಊರಿನ ಸಾಮಾಜಿಕ ಕಳಕಳಿ ಇರುವಂಥ ಯುವಕರ ತಂಡದೊಂದಿಗೆ ಮನೆಯನ್ನು ಪರಿಶೀಲಿಸಿ, ಅವರಿಗೆ ಹಲವು ಸಂಘಟನೆಯಿಂದ ಹಾಗೂ ಸರಕಾರದಿಂದ ಸಿಗುವ ಸವಲತ್ತನ್ನು ತಲುಪಿಸುವ ಜವಾಬ್ದಾರಿ ಹೊತ್ತಿದ್ದೇವೆ.

ವರದಿ: ಸಚೀನ್ ಗೌಡ

Comments