ಬೆಳ್ತಂಗಡಿ: ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದ ಗ್ರಾಮ ಪಂಚಾಯತಿ.

ಬೆಳ್ತಂಗಡಿ, ಅಗಸ್ಟ್ 28:  ಕೊಕ್ಕಡದ ಪಟ್ರಮೆ ಗ್ರಾಮದ ಪುಂಡಿಕಾಯಿ ಎಂಬಲ್ಲಿನ ಶಿವರಾಮ ಆಚಾರ್ಯ ಅವರ ಮನೆಯ ಮೇಲೆ ವಿಪರೀತ ಮಳೆ ಹಾಗೂ ಗಾಳಿಯ ಕಾರಣದಿಂದ ಮರವೊಂದು ಬಿದ್ದು ಅಪಾರವಾದ ಹಾನಿ ಉಂಟಾಗುವ ಸಂಭವವಿತ್ತು. 

ಇದನ್ನು ಗುರುತಿಸಿದ ಸ್ಥಳೀಯ ಮೇಲ್ವಿಚಾರಕ ಶ್ರೀ ಸಚಿನ್ ಅವರು ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕಕ್ಕೆ ಮಾಹಿತಿ ನೀಡಿದ್ದರು.

 
 ಕೊಕ್ಕಡ  ವಿಪತ್ತು ನಿರ್ವಹಣಾ ಘಟಕ'ದ ಸ್ವಯಂಸೇವಕರು ಕೂಡಲೇ ಹಾಜರಾಗಿ ಮರ ತೆರವು ಗೊಳಿಸಿ ಸಂಭವನೀಯ ಅಪಾಯವನ್ನು ತಪ್ಪಿಸಿದ್ದರು. 

ಇವರ ತಂಡದ ಸೇವಾಕಾರ್ಯವನ್ನು ಗಮನಿಸಿದ ಸ್ಥಳೀಯ ಪಟ್ರಮೆ ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ಘಟಕವನ್ನು ವಿಶೇಷವಾಗಿ ಅಭಿನಂದಿಸಿದೆ. ಅಲ್ಲದೇ ವಿಪತ್ತು ನಿರ್ವಹಣಾ ಘಟಕದ ಎಲ್ಲಾ ಸ್ವಯಂಸೇವಕರ ಪರವಾಗಿ ಸಂಯೋಜಕಿಯಾದ ಶ್ರೀಮತಿ ಗಿರಿಜಾ ಅವರಿಗೆ ಪ್ರಶಂಸನೀಯ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದೆ.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಯುತ ರಿತೇಶ್  ಹಾಗೂ ಆಡಳಿತ ಅಧಿಕಾರಿಗಳಾದ ಶ್ರೀ ಅಮ್ಮಿ ಅವರು ಅಭಿನಂದನಾ ಪತ್ರವನ್ನು  ಜನಜಾಗೃತಿ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರ ಉಪಸ್ಥಿತಿಯಲ್ಲಿ ವಿತರಿಸಿದರು.

ವಿಪತ್ತು ನಿರ್ವಹಣೆ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ, ಮೇಲ್ವಿಚಾರಕ ಶ್ರೀ ಸಚಿನ್, ಸೇವಾಪ್ರತಿನಿಧಿ ಶ್ರೀ ಸದಾಶಿವ ಉಪಸ್ಥಿತರಿದ್ದರು.

Comments